ಸೋಮವಾರ, ಆಗಸ್ಟ್ 2, 2021
20 °C

25 ವರ್ಷಗಳ ಹಿಂದೆ: ಶನಿವಾರ 25, ಮೇ 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಷ್ಟಶಕ್ತಿ ವಿರುದ್ಧ ಹೋರಾಟಕ್ಕೆ ಕರೆ

ನವದೆಹಲಿ, ಮೇ 24 (ಯುಎನ್ಐ, ಪಿಟಿಐ)– ಪ್ರತ್ಯೇಕತಾವಾದಿಗಳು, ಉಗ್ರ ಗಾಮಿಗಳು ಮತ್ತು ಅಪರಾಧಿ ಶಕ್ತಿಗಳನ್ನು ಎದುರಿಸಲು ಹಾಗೂ ಸಂವಿಧಾನದ 356ನೇ ವಿಧಿಯ ದುರುಪಯೋಗ ತಡೆ ಯುವುದೂ ಸೇರಿದಂತೆ ರಾಷ್ಟ್ರವು ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ನಿಯಂತ್ರಿಸಲು ರಾಷ್ಟ್ರ ಸನ್ನದ್ಧವಾಗಬೇಕಿದೆ ಎಂದು ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಇಂದು ಕರೆ ನೀಡಿದರು.

11ನೇ ಲೋಕಸಭೆ ರಚನೆಯಾದ ನಂತರ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರದ ಹಿತ ದೃಷ್ಟಿಯಿಂದ ಅಗತ್ಯವಾದರೆ ಪರಮಾಣು ನೀತಿಯ ಪುನರ್‌ಪರಿಶೀಲನೆ, ಪ್ರಸಾರ ಭಾರತಿ ನಿಗಮ ರಚನೆಗೆ ಸರ್ಕಾರ ಒತ್ತು ಕೊಡುವುದು, ಗೋಹತ್ಯೆ ನಿಷೇಧಿಸುವ ಇಂಗಿತ ಹೊಂದಿದೆ. ಸಮಸ್ಯೆಗಳ ಪರಿಹಾರಕ್ಕೆ ಪಾಕಿಸ್ತಾನ ರಚನಾತ್ಮಕ ಪ್ರತಿಕ್ರಿಯೆ ನೀಡಬೇಕು ಎಂದರು.

ಭಾರತೀಯ ಜನತಾ ಪಕ್ಷದ ಪ್ರಣಾಳಿಕೆ ಯಲ್ಲಿ ಪ್ರಸ್ತಾಪವಾಗಿದ್ದ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಸಂವಿಧಾನದ 370ನೇ ವಿಧಿಯ ರದ್ದು ಮೊದಲಾದ ವಿವಾದಾತ್ಮಕ ಪ್ರಕರಣಗಳ ಬಗ್ಗೆ ರಾಷ್ಟ್ರಪತಿಯವರ ಭಾಷಣದಲ್ಲಿ ಚಕಾರವಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ ಬಿಜೆಪಿ ಘೋಷಿಸಿತ್ತು. ಹಾಗೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸವಲತ್ತು ನೀಡಿರುವ ಸಂವಿಧಾನದ ವಿಧಿ 370 ಅನ್ನು ರದ್ದುಗೊಳಿಸುವುದಾಗಿಯೂ ಹೇಳಿತ್ತು.

ಕಲ್ಬುರ್ಗಿ, ಬೀದರ್ ಸಂಪೂರ್ಣ ಬಂದ್

ಕಲ್ಬುರ್ಗಿ, ಮೇ 24– ಗುಲ್ಬರ್ಗ ವಿಶ್ವವಿದ್ಯಾ ಲಯಕ್ಕೆ ಕೂಡಲೇ ಬಸವೇಶ್ವರರ ಹೆಸರನ್ನಿಡಬೇಕು ಎಂದು ಒತ್ತಾಯಪಡಿಸಿ ಇಂದು ಬಸವದಳದವರು ಕರೆ ನೀಡಿದ್ದ ಬಂದ್ ಕಲ್ಬುರ್ಗಿ ಹಾಗೂ ಬೀದರಿನಲ್ಲಿ ಯಶಸ್ವಿಯಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು