ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಜೂನ್‌ 18,1996

Last Updated 17 ಜೂನ್ 2021, 19:30 IST
ಅಕ್ಷರ ಗಾತ್ರ

ಹೆಗಡೆ ಜತೆ ಮಾತುಕತೆಗೆ ದೇವೇಗೌಡರ ಸ್ಪಷ್ಟ ನಕಾರ: ಪಟೇಲರ ರಾಜಿ ಯತ್ನಕ್ಕೆ ತೆರೆ

ನವದೆಹಲಿ, ಜೂನ್‌ 17– ಉಚ್ಚಾಟಿತ ನಾಯಕ ರಾಮಕೃಷ್ಣ ಹೆಗಡೆ ಅವರೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ರಾತ್ರಿ ಸ್ಪಷ್ಟವಾಗಿ ಹೇಳುವುದ
ರೊಂದಿಗೆ ಈ ಇಬ್ಬರು ನಾಯಕರ ಮಧ್ಯೆ ಸಂಧಾನ ನಡೆಸುವ ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ ಅವರ ಎರಡನೇ ಯತ್ನವೂ ಮುರಿದು
ಬಿದ್ದಂತಾಗಿದೆ.

ವಾರಾಂತ್ಯದಲ್ಲಿ ಹೆಗಡೆ ಮತ್ತು ಗೌಡ ಅವರು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸುವರು ಎಂದು ಸಂಧಾನಕ್ಕೆ ಅವಿತರ ಯತ್ನಿಸುತ್ತಿರುವ ಪಟೇಲ್‌ ಅವರು ಹೇಳಿರುವುದರ ಬಗ್ಗೆ ಪ್ರಧಾನಿ ಅವರು ಪ್ರತಿಕ್ರಿಯಿಸಿ ತಾವು ಮತ್ತು ಹೆಗಡೆ ಭೇಟಿಯಾಗುವ ಪ್ರಶ್ನೆಯೇ ಇಲ್ಲ ಎಂದರು. ಇದರಿಂದಾಗಿ ಹೆಗಡೆ ಅವರಿಗೆ ಜನತಾ ದಳದ ಬಾಗಿಲು ಸಂಪೂರ್ಣವಾಗಿ ಮುಚ್ಚಿದಂತಾಗಿದೆ.

ಹೊರ ರಾಜ್ಯ ವಿದ್ಯಾರ್ಥಿಗೆ ಶೇ 15 ಪಾವತಿ ಸೀಟು– ಸುಪ್ರೀಂ ಕೋರ್ಟ್‌ ಸೂಚನೆ

ನವದೆಹಲಿ, ಜೂನ್‌ 17(ಪಿಟಿಐ)– ಕರ್ನಾಟಕದ ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ಇತರ ವೃತ್ತಿಶಿಕ್ಷಣ ಕಾಲೇಜುಗಳಿಗೆ ರಾಜ್ಯದ ಹೊರಗಿನ
ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವ ಸರ್ಕಾರದ ಕ್ರಮವನ್ನು ಇಂದು ಟೀಕಿಸಿದ ಸುಪ್ರೀಂ ಕೋರ್ಟ್‌ ಶೇಕಡಾ 15ರಷ್ಟು ಅಧಿಕ ಶುಲ್ಕದ ಸೀಟುಗಳನ್ನು ದೇಶದ ವಿವಿಧೆಡೆಯ ವಿದ್ಯಾರ್ಥಿಗಳಿಗಾಗಿ ಕಾದಿರಿಸುವಂತೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT