ಶನಿವಾರ, ಮೇ 28, 2022
31 °C

25 ವರ್ಷಗಳ ಹಿಂದೆ: ಶುಕ್ರವಾರ 24.1.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ನಗರಗಳ ಸೌಲಭ್ಯಕ್ಕೆ ನೆರವು: ಉದ್ಯಮಗಳಿಗೆ ಮೊರೆ

ಬೆಂಗಳೂರು,  ಜ. 23– ಬೆಂಗಳೂರಿನ ಹಾಗೂ ರಾಜ್ಯದ ಇತರ ಪ್ರಮುಖ ನಗರಗಳ ರಸ್ತೆ, ವಿದ್ಯುತ್, ನೀರು ಪೂರೈಕೆ ಹಾಗೂ ಇತರ ಮೂಲಸೌಲಭ್ಯಗಳ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಅಂತರರಾಷ್ಟ್ರೀಯ ಕೈಗಾರಿಕಾ ಕೂಟಗಳಿಗೆ ಮನವಿ ಮಾಡಿದರು.

ಇಲ್ಲಿಗೆ ಸಮೀಪದ ವೈಟ್‌ಫೀಲ್ಡ್‌ನಲ್ಲಿ ಟಾಟಾ ಉದ್ಯಮ ಸಮೂಹ ಹಾಗೂ ಸಿಂಗ ಪುರ ಉದ್ಯಮಗಳ ಕೂಟವು ನಿರ್ಮಿಸುತ್ತಿ ರುವ ಅಂತರರಾಷ್ಟ್ರೀಯ ತಂತ್ರಜ್ಞಾನ ಸಂಕೀರ್ಣದ (ಐಟಿಪಿಎಲ್‌) ಮೊದಲ ಹಂತವು 1995ರ ಸೆಪ್ಟೆಂಬರ್‌ನಲ್ಲಿ ಆರಂಭ ಗೊಂಡು, ‘ನಿಗದಿತ ಅವಧಿಗಿಂತಲೂ ಮೊದಲೇ ಪೂರ್ತಿಗೊಳ್ಳುತ್ತಿರುವುದು ನಮ್ಮ ಅಧಿಕಾರಿಗಳ ಸಮೂಹಕ್ಕೆ ‘ಕಣ್ಣು ತೆರೆಸುವ’ ವಿಷಯವಾಗಿದೆ’ ಎಂದು ಪಟೇಲ್ ಹೇಳಿದರು.

‘ಯೋಜನೆಗಳನ್ನು ಸಕಾಲದಲ್ಲಿ ಪೂರ್ತಿಗೊಳಿಸಬೇಕು. ಈ ಮೂಲಕ ವೆಚ್ಚ ಏರಿಕೆಯನ್ನು ತಡೆಯಬಹುದು ಎಂಬ ಪಾಠ ನಮ್ಮ ಅಧಿಕಾರಿಗಳಿಗೆ ಈ ಯೋಜನೆಯಲ್ಲಿ ಅಡಗಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು