ಶನಿವಾರ, ಮೇ 21, 2022
23 °C

25 ವರ್ಷಗಳ ಹಿಂದೆ: ಶನಿವಾರ 25.1.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪ ಚುನಾವಣೆ: ಕಣದಲ್ಲಿ ಉಳಿದ ಅಭ್ಯರ್ಥಿಗಳು

ಬೆಂಗಳೂರು, ಜ. 24– ರಾಜ್ಯ ವಿಧಾನಸಭೆಗೆ ಫೆಬ್ರುವರಿ 8ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಐವರು ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಆರು ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜನತಾ ದಳದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಇಂದು ರಾಮನಗರ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ನಾಮಪತ್ರ ವಾಪಸು ಪಡೆದರು. ಅಂತಿಮವಾಗಿ ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ, ಜನತಾ ದಳದ ಎಂ.ಎಚ್. ಅಮರನಾಥ್ ಅಲಿಯಾಸ್ ಅಂಬರೀಷ್, ಬಿಜೆಪಿಯ ಗಿರಿಗೌಡ ಹಾಗೂ ಪಕ್ಷೇತರರಾದ ಎ.ಬಿ. ಅನಂತರಾಮ ಮತ್ತು ಅಪ್ಪಾಜಯ್ಯ ಸ್ಪರ್ಧೆಯಲ್ಲಿದ್ದಾರೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 7 ಮಂದಿ ಇಂದು ತಮ್ಮ ನಾಮಪತ್ರಗಳನ್ನು ವಾಪಸು ಪಡೆದರು. ಅಂತಿಮವಾಗಿ ಕಾಂಗ್ರೆಸ್‌ನ
ಬಿ. ಲಕ್ಕಪ್ಪ, ಜನತಾ ದಳದ ಸಿ.ಬಿ.ಸುರೇಶ್‌ ಬಾಬು, ಬಿಜೆಪಿಯ ಶಂಕರಪ್ಪ, ಸಮತಾ ಪಕ್ಷದ ರಮೇಶ್ ಬಾಬು, ಪಕ್ಷೇತರರಾದ ಜೆ.ಸಿ. ಮಾಧುಸ್ವಾಮಿ ಹಾಗೂ ಪ್ರಸನ್ನಕುಮಾರ ಸ್ವಾಮಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು