ಮೋಸದಾಟ: ಸಿಬಿಐ ಪ್ರಾಥಮಿಕ ತನಿಖೆ ಆರಂಭ

ನವದೆಹಲಿ, ಮೇ 2 (ಪಿಟಿಐ): ಕ್ರಿಕೆಟ್ ಮೋಸದಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆ ನಡೆಸುವಂತೆ ಕ್ರೀಡಾ ಸಚಿವಾಲಯದಿಂದ ಅಧಿಕೃತ ಪತ್ರ ಬಂದ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ಸಿಬಿಐ ಇಂದು ಪ್ರಾಥಮಿಕ ತನಿಖೆ (ಪಿಇ) ಸಿಬಿಐ ಪ್ರಾರಂಭಿಸಿತು.

ಮೋಸದಾಟಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸದಸ್ಯರು ಮತ್ತು ಕ್ರಿಕೆಟ್ ಆಟಗಾರರ ಮೇಲಿನ ಎಲ್ಲ ಆರೋಪಗಳ ತನಿಖೆಯನ್ನು ನಿಬಿಐ ನಡೆಸಲಿದೆ. ಇದಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟ ಇನ್ನಾವುದೇ ಹಗರಣದ ತನಿಖೆಯನ್ನೂ ನಡೆಸಲು ಸಿಬಿಐಗೆ ಅಧಿಕಾರ ನೀಡಲಾಗಿದೆ.

ಸಂಪಳ್ಳಿ: ದೂರವಾಣಿಗೆ ವಿದ್ಯುತ್ ತಗುಲಿ ದಂಪತಿ ಸಾವು

ಮಂಡ್ಯ, ಮೇ 2– ತಾಲ್ಲೂಕಿನ ಸಂಪಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ದೂರವಾಣಿ ಮೂಲಕ ಪಸರಿಸಿದ ವಿದ್ಯುತ್ ಗಂಡ ಹೆಂಡತಿಯನ್ನು ಅವರ 17ನೇ ವಿವಾಹ ವಾರ್ಷಿಕೋತ್ಸವದಂದು ಬಲಿ ತೆಗೆದುಕೊಂಡಿರುವ ದುರ್ಘಟನೆ ಸಂಭವಿಸಿದೆ.

ಮೃತ ದುರ್ದೈವಿಗಳು ಎಸ್.ಕೆ.ತಮ್ಮಣ್ಣ (40) ಮತ್ತು ಪತ್ನಿ ಮಂಜುಳಾ (32), ಇವರ ಹಿರಿಯ ಪುತ್ರ ಗಿರೀಶನ (15) ಕೈಗೆ ಸುಟ್ಟ ಗಾಯಗಳಾಗಿವೆ.

ದಂಪತಿಗಳು ರಾತ್ರಿ 8.15ರ ಸಮಯದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿ ಭೋಜನ ಮುಗಿಸಿದ್ದಾಗ ದೂರವಾಣಿ ಕರೆ ಬಂದ ಶಬ್ದ ಕೇಳಿ ಗಿರೀಶ್ ಅದನ್ನತ್ತಲು ಹೋದರು. ಅದರ ಶಾಕ್ ಹೊಡೆದು ಸ್ವಲ್ಪ ದೂರಕ್ಕೆ ಎಸೆಯಲ್ಲಟ್ಟ. ಆಗ ತಮ್ಮಣ್ಣನವರೇ ರಿಸೀವರ್್ ಎತ್ತಿಕೊಂಡಾಗ ಅವರಿಗೂ ಶಾಕ್ ತಗುಲಿ ಕೆಳಗೆ ಬಿದ್ದರು. ಅವರ ಮೈ ಮೇಲೆ ದೂರವಾಣಿ ಸಲಕರಣೆ ಮತ್ತು ವೈರ್ ಬಿದ್ದು ಕೂಗಾಡಿ ಪ್ರಜ್ಞೆ ಕಳೆದುಕೊಂಡರು. ಮಂಜುಳಾ ಪತಿಯನ್ನು ಹಿಡಿದು ಮೇಲೆತ್ತಲು ಮುಂದಾದಾಗ ಅವರಿಗೂ ವಿದ್ಯುತ್ ಶಾಕ್ ತಗುಲಿ 20 ಅಡಿ ದೂರಕ್ಕೆ ತಳ್ಳಲ್ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.