ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ತೇವಾಂಶದ ಗಾಳಿ ಅರಬ್ಬಿ ಸಮುದ್ರದ ಕಡೆಯಿಂದ ರಾಜ್ಯದ ಕಡೆಗೆ ಬೀಸುತ್ತಿತ್ತು. ಇದರಿಂದ ಮಳೆ ಕೂಡ ಬರುತ್ತಿತ್ತು. ಆದರೆ, ಅಕ್ಟೋಬರ್ ಎರಡು ಅಥವಾ ಮೂರನೇ ವಾರದಿಂದ ಆರಂಭವಾಗಬೇಕಿದ್ದ ಈ ವಾಯವ್ಯ ಬಿಸಿ ಹವೆ ಸೆಪ್ಟೆಂಬರ್ ತಿಂಗಳಿಂದಲೇ ಆರಂಭವಾಗಿದೆ. ಹೀಗಾಗಿ ಕಳೆದ ಒಂದು ತಿಂಗಳಿಂದ ಸರಿಯಾಗಿ ಮಳೆಯಾಗಿಲ್ಲ. ಇದು ಆತಂಕಕ್ಕೆ ಎಡೆಮಾಡಿದೆ.