ಮೋಸದಾಟ: ಐವರು ಆಟಗಾರರಿಗೆ ನಿಷೇಧ

ನವದೆಹಲಿ, ನ. 3– ಮೋಸದಾಟಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸಿದ ತನಿಖಾ ವರದಿಯಲ್ಲಿ ಹೆಸರಿಸ ಲಾಗಿರುವ ಐವರು ಕ್ರಿಕೆಟಿಗರು ಅಂತರರಾಷ್ಟ್ರೀಯ ಮತ್ತು ದೇಶದೊಳಗಿನ ಕ್ರಿಕೆಟ್ನಲ್ಲಿ ಆಡುವುದನ್ನು ನಿರ್ಬಂಧಿಸಿ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತಾತ್ಕಾಲಿಕವಾಗಿ ಅಮಾನತು ಶಿಕ್ಷೆ ವಿಧಿಸಿದೆ.

ಭಾರತ ತಂಡದ ಮಾಜಿ ನಾಯಕ ಮಹಮದ್ ಅಜರುದ್ದೀನ್, ಅಜಯ್ ಜಡೇಜ, ನಯನ್ ಮೋಂಗಿಯ, ಅಜಯ್ ಶರ್ಮ ಮತ್ತು ಮನೋಜ್ ಪ್ರಭಾಕರ್ ಈ ಶಿಕ್ಷೆಗೆ ಒಳಗಾಗಿರುವ ಆಟಗಾರರಾಗಿದ್ದಾರೆ. ಇವರಲ್ಲಿ ಮನೋಜ್ ಪ್ರಭಾಕರ್ ಈಗಾಗಲೇ ಮೊದಲ ದರ್ಜೆ ಕ್ರಿಕೆಟ್ನಿಂದ ನಿವೃತ್ತ ರಾಗಿದ್ದಾರೆ.

ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರ ಸಾವು

ಕೋಲಾರ, ನ. 3– ನಗರದ ಹೃದಯ ಭಾಗದಲ್ಲಿರುವ ಕುರುಬರ ಪೇಟೆ ಮುಖ್ಯರಸ್ತೆಯಲ್ಲಿನ ಮಹಡಿ ಮನೆಯೊಂದರಲ್ಲಿ ಇಂದು ಮಧ್ಯಾಹ್ನ ಗಂಡ, ಹೆಂಡತಿ ಮತ್ತು ಮಗಳು, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಇಲ್ಲಿನ ಪಿಎಲ್ಡಿ ಬ್ಯಾಂಕ್ನಲ್ಲಿ ಟೈಪಿಸ್ಟ್ ಆಗಿರುವ ಪ್ರಕಾಶ್ (50), ಅವರ ಪತ್ನಿ ಪದ್ಮಾ (38) ಮತ್ತು ಮಗಳು ಸಂಧ್ಯಾರಾಣಿ (12) ಮೃತ ದುರ್ದೈವಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.