ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: 356ನೇ ವಿಧಿ ದುರ್ಬಳಕೆಗೆ ನಾರಾಯಣನ್‌ ವಿರೋಧ

Published 14 ಆಗಸ್ಟ್ 2023, 23:31 IST
Last Updated 14 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಕೇಂದ್ರಕ್ಕೆ ಗಡುವು ನೀಡಿಲ್ಲ: ಜಯಲಲಿತಾ

ಚೆನ್ನೈ, ಆಗಸ್ಟ್‌ 14 (ಪಿಟಿಐ): ‘ಕೇಂದ್ರದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ದಿನ ನಿಗದಿ ಮಾಡಿರುವವರು ಪತ್ರಿಕಾ ಹಾಗೂ ಟಿ.ವಿ ಮಾಧ್ಯಮದವರೇ ಹೊರತು ನಾನಲ್ಲ’ ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾ ಹೇಳಿದ್ದಾರೆ.

‘ಇದುವರೆಗೆ ಸರ್ಕಾರಕ್ಕೆ ನಾನು ಯಾವುದೇ ಗಡುವು ನೀಡಿಲ್ಲ; ಅದು ಕೇವಲ ಮಾಧ್ಯಮ
ಗಳ ಸೃಷ್ಟಿ. ಕೇಂದ್ರ ಸರ್ಕಾರವನ್ನು ಟೀಕಿಸುವುದು, ಅದರ ಸಾಧನೆಗಳನ್ನು ಮುಸುಕು
ಗೊಳಿಸುವ ಉದ್ದೇಶ ನನ್ನದಲ್ಲ’ ಎಂದಿದ್ದಾರೆ.

356ನೇ ವಿಧಿ ದುರ್ಬಳಕೆಗೆ ನಾರಾಯಣನ್‌ ವಿರೋಧ

ನವದೆಹಲಿ, ಆಗಸ್ಟ್‌ 14 (ಯುಎನ್‌ಐ)– ‘ಭಾರತವು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದ್ದು ಅವುಗಳನ್ನು ಬಳಸುವ ಉದ್ದೇಶದಿಂದಲ್ಲ’ ಎಂದು ಒತ್ತಿ ಹೇಳಿದ ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರು ಸಂವಿಧಾನದ 356ನೇ ವಿಧಿಯ ದುರ್ಬಳಕೆ ಮಾಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಆರ್ಥಿಕ ಸುಧಾರಣೆಯ ಪ್ರಕ್ರಿಯೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT