ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಗಾಳಿಯಲ್ಲಿ ಗುಂಡು, ಕರ್ಫ್ಯೂ, ಮತಪೆಟ್ಟಿಗೆಗೆ ನೀರು

Published : 5 ಸೆಪ್ಟೆಂಬರ್ 2024, 19:30 IST
Last Updated : 5 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಮೊದಲ ಹಂತ: ಶೇ 55 ಮತದಾನ

ನವದೆಹಲಿ, ಸೆ. 5– ಆಂಧ್ರ‍ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನ ಕೆಲವೆಡೆ ಹಿಂಸಾಚಾರ ನಡೆದಿದ್ದು, ಉಳಿದಂತೆ ಹದಿನಾರು ರಾಜ್ಯಗಳ 145 ಲೋಕಸಭೆ ಕ್ಷೇತ್ರಗಳಿಗೆ ಮತ್ತು ಕರ್ನಾಟಕದ 115, ಆಂಧ್ರ ಪ್ರದೇಶದ 84 ಮತ್ತು ಮಹಾರಾಷ್ಟ್ರದ 144 ವಿಧಾನಸಭೆ ಕ್ಷೇತ್ರಗಳಿಗೆ ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 55ರಷ್ಟು ಮತದಾನ ನಡೆದಿದೆ.

ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 16.6 ಕೋಟಿ ಮತದಾರರು ಇದ್ದು, ಶೇ 55ರಷ್ಟು ಮಾತ್ರ ಮತದಾನ ನಡೆದಿದೆ. ಡಿಯು ಮತ್ತು ದಾಮನ್‌ ಲೋಕಸಭೆ ಕ್ಷೇತ್ರದಲ್ಲಿ
ಶೇ 70ರಷ್ಟು ಮತದಾನ ನಡೆದಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ಮನೋಹರ್‌ ಸಿಂಗ್‌ ಗಿಲ್‌ ಇಂದು ವರದಿಗಾರರಿಗೆ ತಿಳಿಸಿದರು.

ಗಾಳಿಯಲ್ಲಿ ಗುಂಡು, ಕರ್ಫ್ಯೂ, ಮತಪೆಟ್ಟಿಗೆಗೆ ನೀರು

ಬೆಂಗಳೂರು, ಸೆ. 5– ಚನ್ನಪಟ್ಟಣದಲ್ಲಿ ಗುಂಪು ಗಲಭೆಯಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ, ರಾಯಚೂರಿನ ಎರಡು ಕಡೆ ಮತಪೆಟ್ಟಿಗೆಗೆ ನೀರು ಸುರಿದ ಘಟನೆ ಹಾಗೂ ಚಿತ್ರದುರ್ಗ, ಬೀದರ್‌, ಕೋಲಾರ ಹಾಗೂ ಕಲ್ಬುರ್ಗಿಯಲ್ಲಿ ನಡೆದ ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ರಾಜ್ಯದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಚನ್ನಪಟ್ಟಣದಲ್ಲಿ ಗಲಭೆಯಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಲು ಅಲ್ಲಿಯ ಡಿವೈಎಸ್ಪಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ರಾತ್ರಿ ಕರ್ಫ್ಯೂ ಹಾಗೂ 144ನೇ ಸೆಕ್ಷನ್‌ ಅನ್ವಯ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT