ಅಂಚೆ ಮುಷ್ಕರ ಪೂರ್ಣ ಅಂತ್ಯ

ನವದೆಹಲಿ, ಡಿ. 18 (ಪಿಟಿಐ): ಅಂಚೆ ನೌಕರರ ಪ್ರಮುಖ ಸಂಘಟನೆಯು ಸಹಾ ಇಂದು ಮುಷ್ಕರ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದರಿಂದ ಹದಿಮೂರು ದಿನಗಳ ಸಂಪು ಪೂರ್ಣವಾಗಿ ಅಂತ್ಯಗೊಂಡಂತಾಯಿತು.

ಈಗಾಗಲೇ, ಎರಡು ಒಕ್ಕೂಟಗಳು ಭಾನುವಾರ ರಾತ್ರಿ ಮುಷ್ಕರವನ್ನು ಅಂತ್ಯಗೊಳಿಸಿದ್ದವು. ಅಂಚೆ ನೌಕರರಲ್ಲಿ ಶೇ 70ರಷ್ಟು ಬೆಂಬಲ ಹೊಂದಿರುವ ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಎಫ್ಪಿಇ), ಕೇಂದ್ರ ಸಂಪರ್ಕ ಖಾತೆ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಜತೆ ನಿನ್ನೆ ರಾತ್ರಿ ಉಳಿದೆರಡು ಸಂಘಟನೆಗಳು ಮಾಡಿಕೊಂಡಿದ್ದ ಒಪ್ಪಂದದ ಬಗೆಗೆ ಅತೃಪ್ತಿ ವ್ಯಕ್ತಪಡಿಸಿತ್ತು.

ಆದರೆ, ಸಂಜೆ ತನ್ನ ನಿರ್ಧಾರ ಬದಲಾಯಿಸಿ ನಾಳೆಯಿಂದ ಕೆಲಸಕ್ಕೆ ಹಾಜರಾಗಲು ಇಂದು ಸಂಜೆ ನಿರ್ಧರಿಸಿತು.

ಚನ್ನಪಟ್ಟಣದಲ್ಲಿ ಪ್ರತಿಭಟನೆ; ಲಾಠಿ, ಅಶ್ರುವಾಯು

ಚನ್ನಪಟ್ಟಣ, ಡಿ. 18– ಒಕ್ಕಲಿಗರ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಚನ್ನಪಟ್ಟಣದಲ್ಲಿಂದು ನಡೆಸಿದ ಪ್ರತಿಭಟನೆ ವೇಳೆಯಲ್ಲಿ ಕಲ್ಲುತೂರಾಟ ನಡೆದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಆಶ್ರುವಾಯು ಪ್ರಯೋಗಿಸಿದರು. ಕಲ್ಲು ತೂರಾಟದಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಅಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಬಿಗುವಿನಿಂದ ಕೂಡಿದೆ.

ಪ್ರತಿಭಟನೆ ಪರಿಣಾಮ ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆವರೆಗೆ ವಾಹನ ಸಂಚಾರ ತೀವ್ರ ಅಸ್ತವ್ಯಸ್ತವಾಗಿತ್ತು. ಪ್ರತಿಭಟನೆಯ ಹಿನ್ನೆಲೆ, ರಾಮನಗರದಲ್ಲಿ ಕನಕಪುರ ಮಾರ್ಗವಾಗಿ ಹಾಗೂ ಮದ್ದೂರಿನಲ್ಲಿ ಮಳವಳ್ಳಿ ಮಾರ್ಗದ ಮೂಲಕ ಪೊಲೀಸರು ಸಂಚಾರ ಮಾರ್ಗವನ್ನು ಬದಲಿಸಿದರು.