ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ, ನವೆಂಬರ್‌ 23,1996

Last Updated 22 ನವೆಂಬರ್ 2021, 21:15 IST
ಅಕ್ಷರ ಗಾತ್ರ

ವಿಶ್ವ ಸುಂದರಿ ಸ್ಪರ್ಧೆಗೆಸುಪ್ರೀಂ ಕೋರ್ಟ್‌ ಅಸ್ತು

ನವದೆಹಲಿ, ನ. 22 (ಯುಎನ್‌ಐ)– ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಪ್ರದರ್ಶನದ ಅವಧಿಯಲ್ಲಿ ಅಶ್ಲೀಲತೆ ಹಾಗೂ ನಗ್ನತೆಗೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ವಿಧಿಸಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಇಂದು ತಡೆಯಾಜ್ಞೆ ನೀಡಿದೆ.

ಕರ್ನಾಟಕ ಹೈಕೋರ್ಟ್‌ ತೀರ್ಪಿನಿಂದಾಗಿ, ಸ್ಪರ್ಧೆ ಸಂಘಟಿಸಿರುವ ಸೂಪರ್‌ ಸ್ಟಾರ್‌ ‘ಅಮಿತಾಭ್‌ ಬಚ್ಚನ್‌ ಕಾರ್ಪೊರೇಷನ್‌ ಲಿಮಿಟೆಡ್‌’ ಸಂಸ್ಥೆಯ ಪಾಳೆಯದಲ್ಲಿ ಮೂಡಿದ್ದ ಆತಂಕ ಹಾಗೂ ಅನಿಶ್ಚಿತತೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಕೊನೆಗೊಂಡಿದೆ.

ಹೈಕೋರ್ಟ್‌ನ ತೀರ್ಪು ಪ್ರಾಯೋಗಿಕವಲ್ಲ ಎಂಬುದು ತಮಗೆ ಮನವರಿಕೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ. ಪ್ರೇಕ್ಷಕರಿಗೆ ಮದ್ಯ ವಿತರಣೆ ಮಾಡುವುದಿಲ್ಲ ಎಂದು ಈ ಮುಂಚೆ ಎಬಿಸಿಎಲ್‌ ಸಲ್ಲಿಸಿದ ಪ್ರಮಾಣ ಪತ್ರವನ್ನು ಕೋರ್ಟ್ ದಾಖಲಿಸಿಕೊಂಡಿತು.

ಸೌಂದರ್ಯ ಸ್ಪರ್ಧೆಯ ಸ್ಪರ್ಧಿಗಳು ಅಶ್ಲೀಲತೆ ಅಥವಾ ನಗ್ನತೆಯಲ್ಲಿ ತೊಡಗುವುದು. ಸ್ಪರ್ಧಿಗಳು ಅಥವಾ ಪ್ರೇಕ್ಷಕರ ಯಾವುದೋ ಒಂದು ವರ್ಗಕ್ಕೆ ಮದ್ಯ ವಿತರಣೆ. ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾದರೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಳ್ಳುವುದು ಸೇರಿದಂತೆ ಸೌಂದರ್ಯ ಸ್ಪರ್ಧೆಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಕಳೆದ 19ರಂದು ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT