25 ವರ್ಷಗಳ ಹಿಂದೆ ಶುಕ್ರವಾರ 05.07.1996

ಶಾಸಕರಿಗೆ ಹೆಗಡೆ ಕಿವಿಮಾತು
ವಿಜಾಪುರ, ಜುಲೈ 4– ‘ಖಾಲಿ ಹಾಳೆಗಳ ಮೇಲೆ ಸಹಿ ಹಾಕಬೇಡಿ’– ಜನತಾದಳದ ಉಚ್ಚಾಟಿತ ನಾಯಕ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಜನತಾದಳದ ಶಾಸಕರಿಗೆ ಹೇಳಿದ ಕಿವಿಮಾತು ಇದು.
‘ಜೆ.ಎಚ್.ಪಟೇಲರ ನೇತೃತ್ವದ ಸರ್ಕಾರ ಅಭದ್ರವಾಗಿದೆ ಎಂಬ ಭಯ ಬೇಡ. ಚುನಾವಣೆ ಸಮಯದಲ್ಲಿ ಜನರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಿ’ ಎಂದು ಶಾಸಕರಿಗೆ ಸಲಹೆ ಮಾಡಿದರು.
ಸಾರ್ವಜನಿಕ ವೇದಿಕೆಗಳಲ್ಲಿ ಶಾಸಕರನ್ನು ಟೀಕಿಸುತ್ತಿದ್ದೀರಿ, ಪಟೇಲರ ಸರ್ಕಾರಕ್ಕೆ ನಮ್ಮಿಂದ ಗಂಡಾಂತರವಿಲ್ಲ ಎಂದು ಹೇಳುತ್ತಿದ್ದೀರಿ, ಹಾಗಾದರೆ ಶಾಸಕರು ಏನು ಮಾಡಬೇಕು ಎಂಬ ಪತ್ರಕರ್ತರ ಪ್ರಶ್ನೆಗೆ ಹೆಗಡೆ ಹೀಗೆ ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.