ಸೋಮವಾರ, ನವೆಂಬರ್ 29, 2021
20 °C

25 ವರ್ಷಗಳ ಹಿಂದೆ| ಮಂಗಳವಾರ, 1ನೇ ಅಕ್ಟೋಬರ್‌ 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಂಚನೆ ಹಗರಣ: ರಾವ್‌ ಖುದ್ದು ಹಾಜರಿಗೆ ಕೋರ್ಟ್‌ ವಿನಾಯಿತಿ

ನವದೆಹಲಿ, ಸೆ. 30(ಪಿಟಿಐ)– ಲಕ್ಕೂಭಾಯ್‌ ಪಾಠಕ್‌ ವಂಚನೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರು ಖುದ್ದಾಗಿ ಸಿಬಿಐ ನ್ಯಾಯಾಧೀಶರ ಎದುರು ಹಾಜರಾಗುವುದಕ್ಕೆ ಇಂದು ಸುಪ್ರೀಂ ಕೋರ್ಟ್‌ ವಿನಾಯಿತಿ ನೀಡಿತು.

ರಾವ್‌ ಅವರ ಭದ್ರತೆಗೆ ಗಂಭೀರ ಅಪಾಯವಿದೆ ಎಂಬ ಕಾರಣವೊಡ್ಡಿ ಇಂದು ಮುಂಜಾನೆ ದೆಹಲಿ ಪೊಲೀಸ್‌ ಕಮಿಷನರ್‌ ನಿಖಿಲ್‌ ಕುಮಾರ್‌ ಅವರು ವಿಚಾರಣೆಯ ಸ್ಥಳವನ್ನು ತೀಸ್‌ ಹಜಾರಿ ಕೋರ್ಟಿನಿಂದ ಇನ್ನೊಂದು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸ
ಬೇಕೆಂದು ಕೋರಿ ಸಲ್ಲಿಸಿದ್ದ ವಿಶೇಷ ಮನವಿಯನ್ನು ಪರಿಶೀಲಿಸಿದ ವಿಭಾಗೀಯ ಪೀಠ, ಮುಂದಿನ ಆದೇಶ ನೀಡುವವರೆಗೆ ಈ ವಿನಾಯಿತಿ ನೀಡಿತು. ಈ ವಿಶೇಷ ಮನವಿಯ ವಿಚಾರಣೆಯನ್ನು ಅ.7ಕ್ಕೆ ಕೋರ್ಟ್‌ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು