ಸೋಮವಾರ, ಜುಲೈ 4, 2022
21 °C

25 ವರ್ಷಗಳ ಹಿಂದೆ: ಶುಕ್ರವಾರ 25.4.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

5000 ಕೋಟಿ ಮೌಲ್ಯದ ಹಗರಣ ತನಿಖೆ ವಿಳಂಬಕ್ಕೆ ತರಾಟೆ

ನವದೆಹಲಿ, ಏ. 24 (ಯುಎನ್‌ಐ, ಪಿಟಿಐ)– ಐದು ಸಾವಿರ ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳ ಆಮದು ಹಗರಣ ತನಿಖೆ ವಿಳಂಬ ಆಗುತ್ತಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಆರೋಗ್ಯ ಸೇವೆ ನಿರ್ದೇಶನಾಲಯ ಗಳನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್, ಈ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಸೂಚಿಸಿತು.

ಪೊಲೀಸರ ಗುಂಡಿಗೆ ಚಿರತೆ, ಕಾರ್ಮಿಕನ ಬಲಿ

ಬೆಂಗಳೂರು, ಏ. 24– ದಿಕ್ಕುತಪ್ಪಿ ಆಶ್ಚರ್ಯ ಕರ ರೀತಿಯಲ್ಲಿ ನಗರದೊಳಕ್ಕೆ ನುಸುಳಿದ ಗಂಡು ಚಿರತೆ ಮರಿಯೊಂದನ್ನು ಜೀವಸಹಿತ ಹಿಡಿಯಲು ವಿಫಲರಾದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವಿವೇಚನಾರಹಿತವಾಗಿ ಯದ್ವಾತದ್ವಾ ಗುಂಡು ಹಾರಿಸಿ ಚಿರತೆಯನ್ನು ಕೊಂದುದಲ್ಲದೆ, ಚಿರತೆಯ ‘ಬೇಟೆ’ ನೋಡುತ್ತಿದ್ದ ಕಾರ್ಮಿಕನೊಬ್ಬನನ್ನು ಬಲಿ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

ಸತ್ತ ಚಿರತೆ ದೇಹವನ್ನು ಬನ್ನೇರುಘಟ್ಟ ಅರಣ್ಯಕ್ಕೆ ಒಯ್ಯಲಾಗಿದೆ. ಗುಂಡು ತಗುಲಿ ಮೃತಪಟ್ಟ ವ್ಯಕ್ತಿಯನ್ನು ಬಿಇಎಲ್ ಕಾರ್ಖಾ ನೆಯ ಕಾರ್ಮಿಕ ಮುರಳೀಧರನ್ ಎಂದು ಗುರುತಿಸಲಾಗಿದೆ. ಗುಂಡು ಕತ್ತಿನ ಮೂಲಕ ಪ್ರವೇಶಿಸಿ ಗಂಟಲಿನಿಂದ ಹೊರಬಂದ ಪರಿಣಾಮವಾಗಿ ಆತ ಮೃತಪಟ್ಟಿದ್ದಾನೆ ಎಂದು ಬಿಇಎಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು