ಬುಧವಾರ, ಸೆಪ್ಟೆಂಬರ್ 29, 2021
20 °C

25 ವರ್ಷಗಳ ಹಿಂದೆ: ಶುಕ್ರವಾರ 02-08-1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು, ಆಗಸ್ಟ್‌ 1– ಆಲಮಟ್ಟಿ ಅಣೆಕಟ್ಟೆ ವಿವಾದ ಕುರಿತಂತೆ ದೆಹಲಿಯಲ್ಲಿ ಆಗಸ್ಟ್‌ 6ರಂದು ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಜೆ.ಎಚ್‌. ಪಟೇಲ್‌ ಅವರ ಜತೆ ತಾವು ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಭಾಗವಹಿಸಲಿರುವುದಾಗಿ ಭಾರೀ ನೀರಾವರಿ ಸಚಿವರ ಕೆ.ಎನ್‌. ನಾಗೇಗೌಡ ಇಂದು ವಿಧಾನಪರಿಷತ್ತಿನಲ್ಲಿ ಹೇಳಿದರು. 

ಕೃಷ್ಣಾ ನದಿ ವಿವಾದದ ಬಗ್ಗೆ ಆಂಧ್ರದ ಹೈಕೋರ್ಟಿನಲ್ಲಿ ಆಗಸ್ಟ್‌ 21ರಂದು ನಡೆಯುವ ವಿಚಾರಣೆ ದಿನ ಹಾಜರಾಗಿ ನ್ಯಾಯಾಲಯದ ವ್ಯಾಪ್ತಿ ಕುರಿತು ಪ್ರಶ್ನಿಸುವುದಾಗಿ ಅವರು ಪ್ರಕಟಿಸಿದರು.

ಜನತಾ ದಳದ ಮಹದೇವ ಬಣಕಾರ್‌ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ‘ಆಲಮಟ್ಟಿ ಜಲಾಶಯದ ಮೊದಲನೇ ಹಂತದ ಅಣೆ ಎತ್ತರವನ್ನು ಮಂಜೂರಾತಿ ಪ್ರಕಾರ ಹೆಚ್ಚಿಸುವ ಬಗ್ಗೆ ಆಂಧ್ರದ ಹೈಕೋರ್ಟಿನಿಂದ ತಡೆ ಆಜ್ಞೆ ಇಲ್ಲ. ಎರಡನೇ ಹಂತದ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದಕ್ಕೆ ತಡೆ ಆಜ್ಞೆ ಇದೆ. ಈ ವಿವಾದ ಮತ್ತೆ ಆಗಸ್ಟ್‌ 21ರಂದು ವಿಚಾರಣೆಗೆ ಬರುತ್ತಿದ್ದು, ಕರ್ನಾಟಕದ ನಿಲುವನ್ನು ವಿವರವಾಗಿ ಮಂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು