ನವದೆಹಲಿ, ಸೆ.18(ಪಿಟಿಐ, ಯುಎನ್‌ಐ)– ಐದು ರಾಜ್ಯಗಳಲ್ಲಿ ಇಂದು ನಡೆದ ಮೂರನೇ ಹಂತದ ಮತದಾನದಲ್ಲಿ ಶೇಕಡಾ 53 ರಷ್ಟು ಮತದಾನ ನಡೆದಿದ್ದು, ವ್ಯಾಪಕ ಹಿಂಸಾಚಾರದಲ್ಲಿ ಇಬ್ಬರು ಮ್ಯಾಜಿಸ್ಟ್ರೇಟರು ಮತ್ತು 31 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 47 ಮಂದಿ ಸತ್ತಿದ್ದಾರೆ. 38 ಮಂದಿ ಗಾಯಾಳುಗಳ ಪೈಕಿ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಭ್ಯರ್ಥಿಯೂ ಸೇರಿದ್ದಾರೆ.