ಬೆಂಗಳೂರು, ನ. 6– ಧರಣಿ ಕುಳಿತು, ಸಭೆಯ ಕಲಾಪಕ್ಕೆ ಅಡ್ಡಿ ಉಂಟು ಮಾಡಿದರೆಂಬ ಕಾರಣಕ್ಕೆ 19 ಮಂದಿ ಕಾಂಗ್ರೆಸ್ ಸದಸ್ಯರನ್ನು ಹೆಸರಿಸಿದ ಸಭಾಪತಿ ಡಿ.ಬಿ. ಕಲ್ಮಣ್‌ಕರ್ ಅವರು, ಕಲಾಪದಲ್ಲಿ ಭಾಗವಹಿಸದಂತೆ ಆದೇಶಿಸಿ ಹೊರಕ್ಕೆ ಕಳುಹಿಸಿದ ಅಪರೂಪದ ಪ್ರಸಂಗ ವಿಧಾನಪರಿಷತ್ತಿನಲ್ಲಿ ನಡೆಯಿತು.
ಧರಣಿ ನಿಲ್ಲಿಸಿ ಸಭೆಯ ಕಾರ್ಯಕಲಾಪ ನಡೆಯಲು ಸಹಕರಿಸಬೇಕೆಂದು ಸಭಾಪತಿ ಮತ್ತು ಕಂದಾಯ ಸಚಿವ ಬಿ. ಸೋಮಶೇಖರ್ ಅವರು ಹಲವು ಬಾರಿ ಕೇಳಿಕೊಂಡರೂ ಧರಣಿ ನಿಲ್ಲಿಸಲಿಲ್ಲ. ಇದರಿಂದ ಸಭಾಪತಿ ಅವರು, ‘ವಿರೋಧ ಪಕ್ಷದ ನಾಯಕ ಎಚ್.ಕೆ. ಪಾಟೀಲ್ ಸೇರಿದಂತೆ ಕಾಂಗ್ರೆಸ್ಸಿನ ಎಲ್ಲಾ 19 ಸದಸ್ಯರೂ ದಿನದ ಉಳಿದ ಅವಧಿಗೆ ಸಭೆಯಿಂದ ಹೊರಹೋಗಬೇಕು’ ಎಂದು ಆದೇಶಿಸಿದರು.
‘ಸಿಯಾಚಿನ್’ ಕುರಿತ ಚರ್ಚೆಗೆ ಸಮ್ಮತಿ
ನವದೆಹಲಿ, ನ. 6 (ಯುಎನ್‌ಐ,ಪಿಟಿಐ)– ಮುಂದಿನ ಸುತ್ತಿನಲ್ಲಿ ಚರ್ಚೆಯನ್ನು ಮತ್ತೆ
ಕೈಗೆತ್ತಿಕೊಳ್ಳುವ ನಿರ್ಧಾರದೊಂದಿಗೆ, ನಿತ್ಯ ಕಾಳಗ ನಡೆಯುತ್ತಿರುವ ಗಡಿಯಂಚಿನ ಸಿಯಾಚಿನ್ ಹಿಮನದಿ ಕುರಿತ ಮಾತುಕತೆಯನ್ನು ಭಾರತ ಮತ್ತು ಪಾಕ್‌ನ ಕಾರ್ಯದರ್ಶಿಗಳು ಇಂದು ಮುಕ್ತಾಯ
ಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.