ಪಟೇಲ್ ನಾಯಕತ್ವಕ್ಕೆ ಧಕ್ಕೆ ಇಲ್ಲ: ಎಚ್.ಡಿ. ದೇವೇಗೌಡ
ಬೆಂಗಳೂರು, ನ. 10– ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಆಡಳಿತದ ಬಗೆಗೆ ಅತೃಪ್ತಿ ತಳೆದಿರುವ ಶಾಸಕರು ತಮ್ಮ ಅಳಲನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಇಂದು ಮತ್ತೆ ತೋಡಿಕೊಂಡರು. ಆದರೂ ‘ಇದರಿಂದ ಪಟೇಲ್ ಸರ್ಕಾರಕ್ಕೆ ಯಾವ ಧಕ್ಕೆ ಅಥವಾ ಬೆದರಿಕೆಯೂ ಇಲ್ಲ’ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ಸಭೆಯ ನಂತರ ಹೊರ ಬಂದು ಪತ್ರಕರ್ತ ರೊಂದಿಗೆ ಮಾತನಾಡಿದ ದೇವೇಗೌಡ ಅವರು ‘ಪಕ್ಷದವರಲ್ಲಿನ ಭಿನ್ನಾಭಿಪ್ರಾಯಗಳು ಪಟೇಲ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಿಲ್ಲ ಅಥವಾ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವು
ದಿಲ್ಲ. ಈ ಎಲ್ಲ ಬೆಳವಣಿಗೆಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದು’ ಎಂದರು.

ಪಕ್ಷಾಂತರ ನಿಷೇಧ ಕಾಯಿದೆ: ಸಮಗ್ರ ತಿದ್ದುಪಡಿಗೆ ಒಲವು
ನವದೆಹಲಿ, ನ. 10 (ಪಿಟಿಐ)– ಪಕ್ಷಾಂತರ ನಿಷೇಧ ಕಾಯಿದೆಗೆ ಸಮಗ್ರ ತಿದ್ದುಪಡಿಯ ಅಗತ್ಯವಿದೆ ಎಂಬುದನ್ನು ಬಹುತೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ. ಆದರೆ ಇದು ಸಣ್ಣಪುಟ್ಟ ತಿದ್ದುಪಡಿಗಷ್ಟೇ ಮೀಸ ಲಾಗಿರದೇ ಸಮಗ್ರ ತಿದ್ದುಪಡಿಯಾಗಬೇಕು ಎಂಬುದನ್ನು ಅವು ಒತ್ತಿ ಹೇಳಿವೆ.

ಇಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರ ನಿವಾಸದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವಿಷಯದ ಬಗ್ಗೆ ಬಹುತೇಕ ಒಮ್ಮತದ ಅಭಿಪ್ರಾಯ ಮೂಡಿಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.