ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಸೋಮವಾರ, ಜನವರಿ 12, 1998

Last Updated 11 ಜನವರಿ 2023, 19:30 IST
ಅಕ್ಷರ ಗಾತ್ರ

ವಿಚ್ಛಿದ್ರ ಶಕ್ತಿಗಳ ನಿಗ್ರಹಕ್ಕೆ ಕರೆ; ಸೋನಿಯಾ ಪ್ರಚಾರ ಆರಂಭ
ಶ್ರೀಪೆರಂಬುದೂರು, ಜನವರಿ 11–
ಜಾತಿ, ಮತ, ಧರ್ಮ, ಪ್ರಾಂತ್ಯದ ಹೆಸರಿನಲ್ಲಿ ಸಮಾಜವನ್ನು ಛಿದ್ರಗೊಳಿಸುತ್ತಿರುವ ಶಕ್ತಿಗಳನ್ನು ನಿಗ್ರಹಿಸುವುದು ಕಾಂಗ್ರೆಸ್‌ ಪಕ್ಷಕ್ಕೆ ಸವಾಲು ಆಗಿದೆ ಎಂದು ಸೋನಿಯಾ ಗಾಂಧಿಯವರು ಇಂದು ಇಲ್ಲಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ವಿಚ್ಛಿದ್ರಕಾರಿ ಶಕ್ತಿಗಳ ಕೈಗೆ ಅಧಿಕಾರ ಹೋಗದಂತೆ ತಡೆಯಬೇಕು; ಇದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ’ ಎಂದರು.

ಆರು ವರ್ಷಗಳ ಹಿಂದೆ ತಮ್ಮ ಪತಿ ಹತ್ಯೆಯಾದ ಶ್ರೀಪೆರಂಬುದೂರಿನಲ್ಲಿ ರಾಜೀವ್‌ ಗಾಂಧಿ ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ್ದ ‘ಮಲ್ಲಿಗೆ ಮಂಟಪ’ದ ವೇದಿಕೆಯಿಂದ ಭಾರಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ತಮ್ಮ ಚೊಚ್ಚಲ ರಾಜಕೀಯ ಭಾಷಣ ಮಾಡಿದರು.

‘ಪಕ್ಷದ ಅಧ್ಯಕ್ಷತೆ ಸದ್ಯಕ್ಕೆ ಬೇಡ’
ನವದೆಹಲಿ, ಜನವರಿ 11 (ಪಿಟಿಐ)–
ಸದ್ಯಕ್ಕೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT