ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60ಕ್ಕೆ ಏರಿಸಲು ನಿರ್ಧಾರ

ನವದೆಹಲಿ, ಮೇ 12 (ಪಿಟಿಐ)– ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಲು ಕೇಂದ್ರ ಸಚಿವ ಸಂಪುಟ ಇಂದು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ ಸೇವೆಗೆ ಸೇರಲು ಇರುವ ಗರಿಷ್ಠ ವಯೋಮಿತಿಯನ್ನು ಕೂಡ 2 ವರ್ಷ ಹೆಚ್ಚಿಸಲು ನಿರ್ಧರಿಸಲಾಗಿದೆ.

ಅಮೆರಿಕ ಕಠಿಣ ಕ್ರಮ: ಜರ್ಮನಿ ನೆರವು ರದ್ದು

ವಾಷಿಂಗ್ಟನ್, ಮೇ 12 (ಪಿಟಿಐ)– ಮೂರು ಅಣ್ವಸ್ತ್ರ ಸಾಧನಗಳ ಭೂಗತ ಪರೀಕ್ಷಾರ್ಥ ಸ್ಫೋಟವನ್ನು ನಡೆಸಿದ ಭಾರತದ ವಿರುದ್ಧ ತೀವ್ರ ರೀತಿಯ ಆರ್ಥಿಕ ದಿಗ್ಬಂಧನ ವಿಧಿಸಲು ಆಲೋಚನೆ ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಇಂದು ರಾತ್ರಿ ಪ್ರಕಟಿಸಿದ್ದಾರೆ.

ಇನ್ನು ಮುಂದೆ ಪರಮಾಣು ಪರೀಕ್ಷೆ ನಡೆಸಬಾರದು ಮತ್ತು ಬೇಷರತ್ತಾಗಿ ಸಮಗ್ರ ಅಣ್ವಸ್ತ್ರ ಪ್ರಸರಣ ನಿಷೇದ ಒಪ್ಪಂದಕ್ಕೆ ಸಹಿ ಮಾಡುವಂತೆ ಕ್ಲಿಂಟನ್ ಅವರು ಭಾರತಕ್ಕೆ ಸಲಹೆ ಮಾಡಿದ್ದಾರೆ. ಆದರೆ ಭಾರತದ ವಿರುದ್ಧ ಅಮೆರಿಕ ವಿಧಿಸುವ ಯಾವುದೇ ದಿಗ್ಬಂಧನಗಳನ್ನು ರಷ್ಯಾ ಬೆಂಬಲಿಸುವುದಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವರು ಮಾಸ್ಕೊದಲ್ಲಿ ತಿಳಿಸಿದ್ದಾರೆ.

ಈ ನಡುವೆ ಭಾರತಕ್ಕೆ ನೀಡಲಿದ್ದ 30 ಕೋಟಿ ಡಿಎಂಎಸ್‌ನಷ್ಟು (ಜರ್ಮನಿಯ ಕರೆನ್ಸಿ) ಮೊತ್ತದ ಅಭಿವೃದ್ಧಿ ನೆರವನ್ನು ತಕ್ಷಣದಿಂದಲೇ ತಡೆ ಹಿಡಿಯಲು ಜರ್ಮನಿ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.