ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸೋಮವಾರ, ಮಾರ್ಚ್ 24, 1997

Last Updated 23 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಆಕಮಟ್ಟಿ: ಮಾತುಕತೆ ಮೂಲಕ ಇತ್ಯರ್ಥಕ್ಕೆ ಪ್ರಧಾನಿ ಸಲಹೆ

ಬೆಂಗಳೂರು, ಮಾ. 23– ಆಲಮಟ್ಟಿ ಅಣೆಕಟ್ಟೆ ವಿಚಾರದಲ್ಲಿ ಬಚಾವತ್‌ ನ್ಯಾಯಮಂಡಳಿ ಈಗಾಗಲೇ ನೀಡಿರುವ ತೀರ್ಪಿಗೆ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಎರಡೂ ಬದ್ಧವಾಗಿವೆ. ಅದರಲ್ಲಿ ಸರಿ ತಪ್ಪುಗಳ ಏನೇ ಭಾವನೆಗಳಿದ್ದರೂ ಎರಡೂ ರಾಜ್ಯಗಳ ಮುಖಂಡರು ಪರಸ್ಪರ ಚರ್ಚೆ ಮೂಲಕವೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ಇಲ್ಲಿ ಸೂಚಿಸಿದರು.

‘ಆಲಮಟ್ಟಿ ವಿಚಾರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಿಲುವು ಏನಿದೆ, ಅದು ಎರಡೂ ರಾಜ್ಯಗಳಿಗೆ ಬಿಟ್ಟಿದ್ದು. ಕೇಂದ್ರ ಸರ್ಕಾರ ಎಂದೂ ಕೂಡ ಇದರಲ್ಲಿ ಸೇರಿಲ್ಲ ಅಥವಾ ಭಾಗಿಯಾಗಿಲ್ಲ. ಜಲಸಂಪನ್ಮೂಲ ಖಾತೆ ಸಚಿವಾಲಯವೂ ಇದರಲ್ಲಿ ಸೇರಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಪಾಕಿಸ್ತಾನ ಜತೆ ಚರ್ಚೆಗೆ ಫಾರೂಕ್‌ ಷರತ್ತು
ಉಧಾಂಪುರ, ಮಾ. 23 (ಪಿಟಿಐ)
– ಜಮ್ಮು ಮತ್ತು ಕಾಶ್ಮೀರ ‘ಭಾರತದ ಅವಿಭಾಜ್ಯ ಅಂಗ’ವೆಂದು ಪಾಕಿಸ್ತಾನ ಒಪ್ಪಿಕೊಳ್ಳದ ಹೊರತು ಆ ದೇಶದ ಜೊತೆ ನಡೆಸುವ ಯಾವುದೇ ಮಾತುಕತೆ ಅರ್ಥಹೀನ ಎಂದು ಕಾಶ್ಮೀರದ ಮುಖ್ಯಮಂತ್ರಿ ಡಾ. ಫಾರೂಕ್‌ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

‘ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ನಾವು ಸದಾ ಸಿದ್ಧ. ಶಿಮ್ಲಾ ಒಪ್ಪಂದದ ಪ್ರಕಾರವೇ ಈ ಮಾತುಕತೆ ನಡೆಯಬೇಕು. ಆದರೆ ಜಮ್ಮು ಮತ್ತು ಕಾಶ್ಮೀರ ಸಮಗ್ರ ಭಾರತದ ಒಂದು ಭಾಗ ಎಂಬುದನ್ನು ಪಾಕಿಸ್ತಾನ ಒಪ್ಪಿಕೊಳ್ಳದಿದ್ದರೆ ಈ ಮಾತುಕತೆ ನಡೆಸಿಯೂ ಯಾವುದೇ ಪ್ರಯೋಜನವಿಲ್ಲ’ ಎಂದು ಅವರು ಮಾಜಿ ಯೋಧರ ರ‍್ಯಾಲಿಯೊಂದರಲ್ಲಿ ಮಾತನಾಡುತ್ತ ತಿಳಿಸಿದರು.

‘ನಮ್ಮ ರಾಜ್ಯದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿ’ ಎಂದು ಇಸ್ಲಾಮಾಬಾದ್‌ಗೆ ಕರೆ ನೀಡಿದ ಅವರು, ‘ಜಮ್ಮು ಮತ್ತು ಕಾಶ್ಮೀರದ ಜನತೆ ಪಾಕಿಸ್ತಾನವನ್ನು ಇಷ್ಟಪಡುವುದಿಲ್ಲ ಎಂಬ ಸತ್ಯವನ್ನು ಪಾಕಿಸ್ತಾನ ಒಪ್ಪಿಕೊಳ್ಳಬೇಕು’ ಎಂದು ಆಗ್ರಹಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT