ಬುಧವಾರ, ಮಾರ್ಚ್ 22, 2023
33 °C

25 ವರ್ಷಗಳ ಹಿಂದೆ: ಕಾಂಗ್ರೆಸ್‌ ಚುನಾವಣಾ ಪ್ರಚಾರಕ್ಕೆ ಸೋನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ. ಚಿದಾನಂದ ಮೂರ್ತಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನವದೆಹಲಿ, ಡಿಸೆಂಬರ್‌ 29– ಕನ್ನಡದ ಖ್ಯಾತ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಅವರ ‘ಹೊಸತು ಹೊಸತು’ ಪ್ರಬಂಧ ಸಂಕಲನಕ್ಕೆ 1997ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

25 ಸಾವಿರ ನಗದು ಹಾಗೂ ಕಂಚಿನ ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.

ಇಂದು ಡಾ. ಯು.ಆರ್‌. ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸಭೆಯು ಭಾರತೀಯ ಭಾಷೆಗಳ ಒಟ್ಟು 21 ಲೇಖಕರ ಕೃತಿಗಳಿಗೆ ಪ್ರಸಕ್ತ ಸಾಲಿನ ಪ್ರಶಸ್ತಿಗಳನ್ನು ಆಯ್ಕೆ ಮಾಡಿತು.

ಕಾಂಗ್ರೆಸ್‌ ಚುನಾವಣಾ ಪ್ರಚಾರಕ್ಕೆ ಸೋನಿಯಾ

ನವದೆಹಲಿ, ಡಿಸೆಂಬರ್ 29– ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಕಾರ್ಯಕಾರಿಣಿ ಸದಸ್ಯರ ಮನವಿಯನ್ನು ಕೊನೆಗೂ ಒಪ್ಪಿರುವ ಸೋನಿಯಾ ಗಾಂಧಿ ಅವರು, ಬರುವ ಮಧ್ಯಂತರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲು ಇಂದು ನಿರ್ಧರಿಸಿದರು.

ಸೋನಿಯಾ ಅವರ ಈ ತೀರ್ಮಾನದಿಂದ ಕಾಂಗ್ರೆಸ್‌ ಇತ್ತೀಚಿನ ವರ್ಷಗಳಲ್ಲಿ ಕಳೆದುಕೊಂಡಿದ್ದ ನೆಹರೂ–ಇಂದಿರಾ ಗಾಂಧಿ ಕುಟುಂಬದ ಪಾತ್ರವು ಚುನಾವಣಾ ರಾಜಕೀಯ ರಂಗದಲ್ಲಿ ಮತ್ತೆ ವಿಜೃಂಭಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು