50 ವರ್ಷಗಳ ಹಿಂದೆ: ಶುಕ್ರವಾರ, 19 ಜನವರಿ 1973

ಭದ್ರಾವತಿ ಕಾರ್ಖಾನೆ ಸ್ವರ್ಣೋತ್ಸವ ಆರಂಭ
ಭದ್ರಾವತಿ, ಜ. 18– ಸ್ಥಳೀಯ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸುವರ್ಣ ಮಹೋತ್ಸವವು ಇಂದು ಬೆಳಿಗ್ಗೆ ಇಲ್ಲಿ ವಿಧ್ಯುಕ್ತವಾಗಿ ಆರಂಭವಾಯಿತು.
ಕಾರ್ಖಾನೆಯ ಎಲ್ಲ ಅಧಿಕಾರಿಗಳೂ ಮುಖ್ಯದ್ವಾರದ ಬಳಿ ನೆರೆದು, ಈಗ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಉಕ್ಕಿನ ಕಾರ್ಯಾಗಾರವಾಗಿರುವ ಈ ಕಾರ್ಖಾನೆ ಈ ಮಟ್ಟ ಮುಟ್ಟಲು ತ್ಯಾಗ ಮಾಡಿದ ಎಲ್ಲರಿಗೂ ನಮನ ಸಲ್ಲಿಸಿದರು.
ರಾಷ್ಟ್ರಪತಿ ಆಳ್ವಿಕೆಯಲ್ಲಿ ಆಂಧ್ರ
ನವದೆಹಲಿ, ಜ. 18– ಆಂಧ್ರ ಪ್ರದೇಶವು ಇಂದಿನಿಂದ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಪ್ರತ್ಯೇಕತಾವಾದಿ ಚಳವಳಿಯಿಂದ ಕುಸಿದುಬಿದ್ದ ಕಾನೂನು, ಶಿಸ್ತು ಮತ್ತು ಶಾಂತಿ ಪರಿಸ್ಥಿತಿಯನ್ನು ಎದುರಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದ್ದರಿಂದ ಈ ಕ್ರಮ ಅನಿವಾರ್ಯವಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.