ಪಾಕ್‌ಗೆ ಅಮೆರಿಕ ಶಸ್ತ್ರಾಸ್ತ್ರ ನೆರವು: ಭಾರತದ ಭದ್ರತೆಗೆ ಆತಂಕಕಾರಿ– ಸ್ವರಣಸಿಂಗ್
ನವದೆಹಲಿ, ಮಾರ್ಚ್ 14– ಮತ್ತೊಮ್ಮೆ ‘ಭಾರತದ ಭದ್ರತೆಗೆ ತೀವ್ರ ಗಂಡಾಂತರ’ ಒಡ್ಡುವಂತೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬ ರಾಜನ್ನು ಪುನರಾರಂಭಿಸುವ ಅಮೆರಿಕದ ಪ್ರಯತ್ನ ಕುರಿತು ವಿದೇಶಾಂಗ ಸಚಿವ ಸ್ವರಣ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಭಾರತದ ‘ಅಗಾಧ ಕಳವಳ’ ವ್ಯಕ್ತಪಡಿಸಿದರು.
ಈ ವಿಷಯದಲ್ಲಿ ಭಾರತದ ಅಭಿಪ್ರಾಯಗಳನ್ನು ಅಮೆರಿಕ ಸರ್ಕಾರಕ್ಕೆ ಆ ರಾಷ್ಟ್ರದ ಹೊಸ ರಾಯಭಾರಿ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ಅವರ ಮೂಲಕ ರವಾನಿಸುವುದಾಗಿ ಅವರು ತಿಳಿಸಿದರು.
***
ಇಂದಿರಾ ಗಾಂಧಿ ಧೋರಣೆಗಳು ವಿಫಲ– ಎಸ್ಸೆನ್
ಬೆಂಗಳೂರು, ಮಾರ್ಚ್ 14– ‘ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಧೋರಣೆಗಳು ವಿಫಲವಾಗಿವೆ’ ಎಂದು ಇಲ್ಲಿ ಕಟುವಾಗಿ ಟೀಕಿಸಿದ ಸಂಸ್ಥಾ ಕಾಂಗ್ರೆಸ್ ನಾಯಕ ಶ್ರೀ ಎಸ್. ನಿಜಲಿಂಗಪ್ಪ ಅವರು, ‘ತಮ್ಮ ಧೋರಣೆಗಳ ತಳಹದಿಯ ಮೇಲೆ ಮತ್ತೆ ಚುನಾವಣೆಗಳನ್ನು ಎದುರಿಸಲಿ’ ಎಂದು ಸವಾಲು ಹಾಕಿದರು.
‘ಬೆಲೆಗಳು ಯಾವೊಂದೂ ತಡೆಯಿಲ್ಲದೆ ಏರುತ್ತಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಪಾದನೆ ಇಳಿಮುಖವಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.