ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷದ ಹಿಂದೆ ಈ ದಿನ | ಕಪಿಲಾ ಯೋಜನೆ ಅಕ್ರಮಗಳ ಬಗ್ಗೆ ಕ್ರಮ ವಿಳಂಬ

1973ರ ಜುಲೈ 27, ಶುಕ್ರವಾರ
Published 26 ಜುಲೈ 2023, 22:19 IST
Last Updated 26 ಜುಲೈ 2023, 22:19 IST
ಅಕ್ಷರ ಗಾತ್ರ

ಬಾಂಗ್ಲಾದೇಶಕ್ಕೆ ಮನ್ನಣೆ ನೀಡಲು ಭುಟ್ಟೋ ಸಿದ್ಧ: ಕಾಶ್ಮೀರ ಬಗ್ಗೆ ರಾಜಿ ಇಲ್ಲ

ಪ್ಯಾರಿಸ್‌, ಜುಲೈ 26– ಬಾಂಗ್ಲಾದೇಶಕ್ಕೆ ಮನ್ನಣೆ ನೀಡಲು ತಾವು ಸಿದ್ಧವಾಗಿರುವುದಾಗಿಯೂ ಆದರೆ, ಕಾಶ್ಮೀರದ ಬಗ್ಗೆ ತಾವು ಜಗ್ಗುವುದಿಲ್ಲವೆಂದು ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಇಂದು ಇಲ್ಲಿ ಘೋಷಿಸಿದರು.

ಭಾರತದಲ್ಲಿರುವ 60 ಸಾವಿರಮಂದಿ ಯುದ್ಧ ಬಂಧಿಗಳ, ಬ್ರಿಟಿಷ್‌ ಮತ್ತು ಫ್ರೆಂಚ್‌ ನಾಯಕರ ಅಭಿಪ್ರಾಯ ಪಾಕಿಸ್ತಾನಕ್ಕೆ ಅನುಕೂಲವಾಗಿದೆ ಎಂದರು.

***

ಕಪಿಲಾ ಯೋಜನೆ ಅಕ್ರಮಗಳ ಬಗ್ಗೆ ಕ್ರಮ ವಿಳಂಬ

ಬೆಂಗಳೂರು, ಜುಲೈ 26– ಕಪಿಲಾ ಯೋಜನೆಗೆ ಸೇರಿದ ನಾಲೆ ಕೆಲಸದಲ್ಲಿ ಕಂಡು ಬಂದ ಕೆಲ ಅಕ್ರಮಗಳ ಬಗ್ಗೆ ವಿಚಾರಣೆ ನಡೆಯಬೇಕೆಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರದ ಆಜ್ಞೆಯಾಗಿದ್ದರೂ, ಈ ಬಗ್ಗೆ ತೀವ್ರತರವಾದ ಯಾವ ಕ್ರಮವನ್ನೂ ಇನ್ನೂ ಕೈಗೊಂಡಿಲ್ಲವೆಂದು ತಿಳಿದುಬಂದಿದೆ.

ವಿಚಾರಣೆ ವಿಳಂಬವಾದಲ್ಲಿ ಅಕ್ರಮಗಳನ್ನು ಸಾಬೀತು ಮಾಡಲು ಸಹಾಯಕವಾದ ಸಾಕ್ಷ್ಯಗಳನ್ನು ಮುಚ್ಚಲು ಸಾಧ್ಯವಾಗುವುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT