ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಯೋಜನೆ: ಬರೀ ಕಾಗದದ ಮೇಲಿನ ಅಟಾಟೋಪ

ಸೋಮವಾರ 22, ಏಪ್ರಿಲ್‌ 1974
Published 21 ಏಪ್ರಿಲ್ 2024, 19:38 IST
Last Updated 21 ಏಪ್ರಿಲ್ 2024, 19:38 IST
ಅಕ್ಷರ ಗಾತ್ರ

ಯೋಜನೆ: ಬರೀ ಕಾಗದದ ಮೇಲಿನ ಅಟಾಟೋಪ

ಮುಂಬೈ, ಏ. 21– ‘ಕಾಗದದ ಮೇಲಿನ ಗುರಿಗಳ ಬೂಟಾಟಿಕೆ’ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಯೋಜನಾ ಆಯೋಗದ ಮಾಜಿ ಸದಸ್ಯ ಡಾ. ಬಿ.ಎಸ್‌. ಮಿನ್ಹಾಸ್ ಅವರು ಐದನೇ ಯೋಜನೆಯನ್ನು ಇಂದು ಟೀಕಿಸಿ, ಅದರ ಎರಡು ಪ್ರಮುಖ ಉದ್ದೇಶಗಳಾದ ದಾರಿದ್ರ್ಯ ನಿವಾರಣೆ ಹಾಗೂ ಸ್ವಪರಿಪೂರ್ಣ ತೆಗಳಿಗೆ ಈಗಾಗಲೇ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ ಎಂದರು.

ಸ್ವಾವಲಂಬನೆ ಹೆಸರಿನಲ್ಲಿ ಸದಾಕಾಲವೂ ವಿದೇಶಿಯರ ಅವಲಂಬನೆಗೆ ಸಿಕ್ಕಿಬೀಳುವ ಅಪಾಯವನ್ನು ಭಾರತ ಎದುರಿಸುತ್ತಿದೆ. ಅಂಥ ವಿದೇಶಿ ಶಕ್ತಿಗಳು ಭಾರತದ ಪುರೋಭಿವೃದ್ಧಿ ಬಯಸುವ ರಾಷ್ಟ್ರಗಳಾಗಿರಬಹುದು ಅಥವಾ ಭಾರತವನ್ನು ನುಂಗಲೆಳಸುವ ತಿಮಿಂಗಿಲಗಳಾಗಿರಬಹುದು ಎಂದು ಅವರು ‘ಭಾರತದಲ್ಲಿ ಆರ್ಥಿಕ ಧೋರಣೆ’ ವಿಷಯವಾಗಿ ಪ್ರಥಮ ರಾಷ್ಟ್ರೀಯ ಸಮ್ಮೇಳನದ ಭಾಷಣದಲ್ಲಿ ತಿಳಿಸಿದರು.

***

ಇಡೀ ಸಮಾಜದ ಉನ್ನತಿಗೆ ವಿವಿಧ ಜಾತಿಗಳ ಪ್ರತ್ಯೇಕ ಸಂಘಟನೆ ಅನುಕೂಲಕರ

ಮಂಗಳೂರು, ಏ. 21: ‘ಸ್ವಾತಂತ್ರ್ಯಪೂರ್ವದಲ್ಲಿ ಸ್ವಜನ, ಸ್ವಭಾಷ, ಸ್ವಧರ್ಮ, ಸ್ವದೇಶ ಪ್ರಚಾರದಲ್ಲಿ ಬ್ರಾಹ್ಮಣ ಬಹಳ ದೊಡ್ಡ ಕೆಲಸ ಮಾಡಿದ್ದರಿಂದ ರಾಜಕೀಯ ಮುಕ್ತಿಯನ್ನು ದೇಶ ಕಂಡುಕೊಂಡಿತು. ಆದರೆ ಸ್ವಾತಂತ್ರ್ಯಾನಂತರ ರಾಜಕೀಯ ಮತ್ತು ಅಧಿಕಾರದಾಹ ಹೆಚ್ಚಿ ಗೊಂದಲಮಯ ಜೀವನದಲ್ಲಿ ಸಿಲುಕಿ
ಕೊಂಡಿದ್ದೇವೆ’ ಎಂದು ಮಂಗಳ ಗಂಗೋತ್ರಿ ಡೈರೆಕ್ಟರ್‌ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಅವರು ಇಂದು ಹೇಳಿದರು.

ಅವರು ಇಲ್ಲಿ ಜಿಲ್ಲಾ ಬ್ರಾಹ್ಮಣರ ಪರಿಷತ್ತನ್ನು ಉದ್ಘಾಟಿಸಿ ಮಾತನಾಡಿದರು.

ಜಾತೀಯ ಸಂಘವನ್ನು ಕಟ್ಟುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ ಅವರು, ‘ಪ್ರತಿ ಜಾತಿಯವರೂ ತಮ್ಮ ತಮ್ಮ ಸಂಘಟನೆಯಿಂದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡರೆ, ಇಡೀ ಸಮಾಜವೇ ಉನ್ನತಿಯನ್ನು ಹೊಂದುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT