ಸೋಮವಾರ, ಮೇ 23, 2022
28 °C

50 ವರ್ಷಗಳ ಹಿಂದೆ: ಬುಧವಾರ, 17 ಫೆಬ್ರವರಿ 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರೋಧಿ ಸಭೆ ಚದುರಿಸುವ ಚಮತ್ಕಾರ ಯಂತ್ರ
ಇಂದೋರ್, ಫೆ. 16:
 ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಸ್ಪರ್ಧಿ ಮಾತನಾಡುತ್ತಿರುವ ಚುನಾವಣೆ ಸಭೆ ಯಿಂದ ಜನರ ಗಮನ ಪರಿಣಾಮಕಾರಿಯಾಗಿ ಬೇರೆ ಕಡೆಗೆ ತಿರುಗಿಸಲು ಅತ್ಯುತ್ತಮ ಸಾಧನ ಯಾವುದು?

ಆ ಪ್ರದೇಶದಲ್ಲೇ ಹೆಲಿಕಾಪ್ಟರನ್ನು ಇಳಿಸಿ ದರೆ, ಚುನಾವಣೆ ಸಭೆ ನಿರ್ಜನವಾಗುತ್ತದೆ.  ಹಳ್ಳಿಗಾಡಿನ ಮುಗ್ಧ ಜನ ಹೆಲಿಕಾಪ್ಟರನ್ನು ನೋಡಲು ಓಡಿ ಬರುತ್ತಾರೆ.

ಕಳೆದ ಮಹಾ ಚುನಾವಣೆಗಳಲ್ಲಿ ಗ್ವಾಲಿ ಯರ್‌ನ ರಾಜಮಾತೆ ಈ ತಂತ್ರವನ್ನು ಅನುಸರಿಸಿದವರಲ್ಲಿ ಮೊದಲನೆಯವರು. ಆಡಳಿತ ಕಾಂಗ್ರೆಸ್ಸಿನ ಅಭ್ಯರ್ಥಿ ಗ್ವಾಲಿಯರ್‌ನಲ್ಲಿ ಸೋತರು. ತಮ್ಮ ಪ್ರತಿಸ್ಪರ್ಧಿ ಹೆಲಿಕಾಪ್ಟರನ್ನು ಬಳಸಿದ್ದು ತಮ್ಮ ಸೋಲಿಗೆ ಕಾರಣಗಳಲ್ಲೊಂದು ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಸಲ ಆಡಳಿತ ಕಾಂಗ್ರೆಸ್‌ ಪಕ್ಷವೂ ಸವಾಲನ್ನೆದುರಿ ಸಲು ಎರಡು ಹೆಲಿಕಾಪ್ಟರುಗಳನ್ನು ಹೊಂದಿದೆ.

ಪಾಕಿಸ್ತಾನದಲ್ಲಿನ ಭಾರತ ರಾಯಭಾರಿಗೆ ದೆಹಲಿಗೆ ಬರಲು ಕರೆ
ನವದೆಹಲಿ, ಫೆ. 16:
ಇಂಡಿಯನ್ ಏರ್‌ಲೈನ್ಸ್‌ನ ವಿಮಾನವನ್ನು ಅಪಹರಿಸಿ, ಅದನ್ನು ಸುಟ್ಟನಂತರ ಕಂಡುಬಂದ ಪಾಕಿ ಸ್ತಾನದ ಹಗೆತನದ ಮನೋಭಾವ ಕುರಿತು ತುರ್ತು ಸಮಾಲೋಚನೆಗಳನ್ನು ನಡೆಸಲು ದೆಹಲಿಗೆ ಬರುವಂತೆ, ಪಾಕಿಸ್ತಾನದಲ್ಲಿನ ತನ್ನ ಹೈಕಮಿಷನರರಿಗೆ ಭಾರತ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು