ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 17.6.1971

50 ವರ್ಷಗಳ ಹಿಂದೆ ಗುರುವಾರ 17.6.1971
Last Updated 16 ಜೂನ್ 2021, 19:31 IST
ಅಕ್ಷರ ಗಾತ್ರ

ಐಎಎಸ್‌ಗೆ ಅಡ್ಡಿಯಾದ ವಿವಾಹ ಬಂಧ

ನವದೆಹಲಿ, ಜೂನ್ 16– ಆಡಳಿತ ಕಾಂಗ್ರೆಸ್ ಸದಸ್ಯೆ ಶ್ರೀಮತಿ
ಲಕ್ಷ್ಮೀಕಾಂತಮ್ಮ ಅವರ ಐಎಎಸ್ ಅಧಿಕಾರಿ ಆಗುವ ಆಸೆ, ಆಕಾಂಕ್ಷೆ ಈಡೇರದೇ ಹೋಯಿತು. ಕಾರಣ
ಅವರು ವಿವಾಹಿತರು.

ಐಎಎಸ್ ಮತ್ತು ಐಎಫ್‌ಎಸ್ ಪರೀಕ್ಷೆ ಗಳಿಗೆ ಮಹಿಳೆಯರು ಕೂಡುವುದರ ವಿರುದ್ಧ ಇಂತಹ ನಿಷೇಧಗಳನ್ನು ಹೇರಿರುವುದಕ್ಕಾಗಿ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಕಾಲದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತಾವು ವಿವಾಹ ಬಂಧನಕ್ಕೊಳಗಾದ ಕಾರಣ, ಪದವಿ ಪಡೆದ ಕೂಡಲೇ
ಐಎಎಸ್ ಪರೀಕ್ಷೆಗೆ ಕೂಡಲಾಗಲಿಲ್ಲ ಎಂದವರು ತಿಳಿಸಿದರು.

‘ಐಎಎಸ್‌ಗೆ ಆದ ನಷ್ಟ ಲೋಕಸಭೆಗೆ ವರವಾಗಿ ಪರಿಣಮಿಸಿದೆ’ ಎಂದು ಗೃಹಖಾತೆ ರಾಜ್ಯ ಸಚಿವ ರಾಂನಿವಾಸ ಮಿರ್ಧಾ ನುಡಿದರು.

ಸ್ಪೀಕರ್ ಧಿಲ್ಲೋನ್ ‘ನೀವು ಇನ್ನೂ ಕೆಲವು ಕಾಲ ಕಾಯಬೇಕಾಗಿತ್ತು’ ಎಂದು ನಗೆಯಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT