ಬುಧವಾರ, ಸೆಪ್ಟೆಂಬರ್ 22, 2021
29 °C

50 ವರ್ಷಗಳ ಹಿಂದೆ: ಶುಕ್ರವಾರ 06-08-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಮೌಲ್ಯಕ್ಕೆ ಮುನ್ನ ಬಿರ್ಲಾಗಳಿಂದ ವಿನಿಮಯ ನಿಯಮ ಉಲ್ಲಂಘನೆ

ನವದೆಹಲಿ, ಆ. 5– ಬಿರ್ಲಾ ಸ್ವಾಮ್ಯಕ್ಕೆ ಸೇರಿದ ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು 1966ರ ಜೂನ್ 6ರಂದು ‘ರೂಪಾಯಿ ಮೌಲ್ಯ ವಿಚ್ಛೇದನವಾಗುವುದಕ್ಕೆ ಸ್ವಲ್ಪ ಮೊದಲು’ ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ಮೂಲಕ ವಿದೇಶಿ ವಿನಿಮಯದ ವಹಿವಾಟೊಂದನ್ನು ನಡೆಸಿತೆಂದು ರಾಜ್ಯಸಭೆಗೆ ಇಂದು ತಿಳಿಸಲಾಯಿತು.

ಗೃಹ ಶಾಖೆಯ ರಾಜ್ಯ ಮಂತ್ರಿ ಶ್ರೀ ಆರ್.ಎನ್. ಮಿರ್ಧಾ ಅವರು ಶ್ರೀ ಕಲ್ಯಾಣರಾಯ್ ಅವರ ಒಂದು ಪ್ರಶ್ನೆಗೆ ಉತ್ತರ ಕೊಟ್ಟು, ಬಿರ್ಲಾ ಸ್ವಾಮ್ಯದ ಕೆಲವು ಸಂಸ್ಥೆಗಳು ವಿದೇಶಿ ವಿನಿಮಯದ ನಿಯಮಗಳನ್ನು ಉಲ್ಲಂಘಿಸಿವೆಯೆಂಬ ಆರೋಪಗಳ ಕುರಿತು ನಡೆಯುತ್ತಿರುವ ವಿಚಾರಣೆಯ ಒಂದು ಭಾಗವಾಗಿ ಈ ಪ್ರಕರಣದ ಬಗೆಗೆ ‘ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್’ ತನಿಖೆ ನಡೆಸುತ್ತಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು