ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ, ಬುಧವಾರ, 8.9.1971

Last Updated 7 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ನವದೆಹಲಿ, ಸೆ. 7– ಪಟ್ಟಣ ಪ್ರದೇಶಗಳಲ್ಲಿ ಆಸ್ತಿ ಮೇಲೆ ಮಿತಿ ವಿಧಿಸುವ ಶಾಸವನ್ನು ಯಾರು ಮಾಡಬೇಕು? ಕೇಂದ್ರವೇ, ವಿವಿಧ ರಾಜ್ಯಗಳೆ?

ಈ ಬಗೆಯ ವಿವಿಧ ರಾಜ್ಯಗಳು ವಿಭಿನ್ನ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ಅಗತ್ಯವಾದ ಶಾಸನವನ್ನು ಕೇಂದ್ರ ಸರ್ಕಾರ ರಚಿಸುವುದಕ್ಕೆ ಮಹಾರಾಷ್ಟ್ರ, ಜಪಾನ್ ಮತ್ತು ಉತ್ತರಪ್ರದೇಶ ಬೆಂಬಲ ವ್ಯಕ್ತಪಡಿಸಿವೆ. ಆಸ್ತಿ ಮಿತಿ ಪ್ರಶ್ನೆಯನ್ನು ಪರಿಶೀಲಿಸಲು ನೇಮಕ ಮಾಡಿರುವ ಸಮಿತಿಯ ವರದಿ ಬಂದ ಬಳಿಕ ಆಂಧ್ರ ಮತ್ತು ತಮಿಳುನಾಡು ಅಭಿಪ್ರಾಯ ವ್ಯಕ್ತಪಡಿಸುವುದಾಗಿ ತಿಳಿಸಿವೆ.

5 ಲಕ್ಷ ರೂ. ಮಿತಿಯನ್ನು ಸೂಚಿಸುವ ಕೇಂದ್ರದ ಮಾದರಿ ಮಸೂದೆಗೆ ಉಳಿದ ಬಹುತೇಕ ರಾಜ್ಯಗಳು ಬೆಂಬಲ ವ್ಯಕ್ತಪಡಿಸಿವೆ. ಬಿಹಾರವು 5 ಲಕ್ಷ ರೂ. ಮಿತಿಯನ್ನು ಜಾರಿಗೆ ತಂದು ಈಗಾಗಲೇ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.

ಪೊಲೀಸ್ ‘ದೌರ್ಜನ್ಯ’ ವಿರುದ್ಧ
ಠಾಣೆಗೆ ಮುತ್ತಿಗೆ

ತುಮಕೂರು, ಸೆ. 7– ಸ್ಥಳೀಯ ಮುಖಂಡರಿಬ್ಬರ ಮೇಲೆ ಪೊಲೀಸರು ದೌರ್ಜನ್ಯವೆಸಗಿ ದರೆಂಬ ಆಪಾದನೆ ಮೇಲೆ ಇಂದು ಇಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಉದ್ರಿಕ್ತಗೊಂಡ ನಿಮಿತ್ತ, ಜಿಲ್ಲಾ ಮ್ಯಾಜಿಸ್ಟ್ರೇಟರು ನಗರದಲ್ಲಿ 144ನೆಯ ಸೆಕ್ಷನ್ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿದ್ದಾರೆ.

ಉದ್ರಿಕ್ತಗೊಂಡ ಗುಂಪು ಬಸ್ಸುಗಳ ಮೇಲೆ ಕಲ್ಲು ತೂರಿ ಗಾಜು ಒಡೆದುದಲ್ಲದೆ ಪೊಲೀಸ್ ಸ್ಟೇಷನ್ ಮುಂದಿದ್ದ ಕಾರೊಂದಕ್ಕೆ ಬೆಂಕಿಹಚ್ಚಿ ಸುಡಲು ಪ್ರಯತ್ನಿಸಿತೆಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT