ಗುರುವಾರ , ಅಕ್ಟೋಬರ್ 28, 2021
18 °C

50 ವರ್ಷಗಳ ಹಿಂದೆ: ಭಾನುವಾರ, ಸೆಪ್ಟೆಂಬರ್ 26, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹ ರಾವ್ ಆಂಧ್ರದ ಹೊಸ ಮುಖ್ಯಮಂತ್ರಿ

ಹೈದರಾಬಾದ್, ಸೆ. 25– ಶಿಕ್ಷಣ ಸಚಿವ ಪಿ.ವಿ. ನರಸಿಂಹರಾವ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿ ಇಂದು ಚುನಾಯಿತರಾದರು.

ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಗಳಾದ ಸಿ. ಸುಬ್ರಹ್ಮಣ್ಯಂ ಮತ್ತು ಉಮಾಶಂಕರ ದೀಕ್ಷಿತ್ ಅವರು ಇಂದು ರಾತ್ರಿ ಇಲ್ಲಿ ಸಮಾವೇಶಗೊಂಡಿದ್ದ ಪಕ್ಷದ ಸಭೆಯಲ್ಲಿ ಕೆ. ಬ್ರಹ್ಮಾನಂದ ರೆಡ್ಡಿ ಅವರ ಉತ್ತರಾಧಿಕಾರಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.

ಈ ನಿರ್ಧಾರಕ್ಕೆ ಪಕ್ಷದ ಶಾಸಕರೆಲ್ಲರ ಬೆಂಬಲ ಸಿಕ್ಕಿರುವುದಾಗಿ ತಿಳಿದುಬಂದಿದೆ.

ಪದಚ್ಯುತ ಮುಖ್ಯಮಂತ್ರಿ ಬ್ರಹ್ಮಾನಂದ ರೆಡ್ಡಿ ಅವರು ನರಸಿಂಹರಾವ್ ಅವರ ಹೆಸರನ್ನು ಸೂಚಿಸಿದರು. ಎಪಿಸಿಸಿ ಅಧ್ಯಕ್ಷ ನರಸಾರೆಡ್ಡಿ ಅವರು ಅನುಮೋದಿಸಿದರು.

ಹೊಸ ನಾಯಕನ ಆಯ್ಕೆಗೆ ಮುಂಚೆ ನಾಲ್ಕು ಗಂಟೆ ಕಾಲ ಹೈಕಮಾಂಡ್ ಪ್ರತಿನಿಧಿಗಳು ಸೇರಿದಂತೆ ಹಲವು ನಾಯಕರು ಚರ್ಚೆ ನಡೆಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು