ಬುಧವಾರ, ಡಿಸೆಂಬರ್ 7, 2022
23 °C

50 ವರ್ಷಗಳ ಹಿಂದೆ: ಶನಿವಾರ, ನವೆಂಬರ್‌ 18, 2072

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರದೊಳಗಾಗಿ ಕೃಷ್ಣಾ ನಾಲೆ ಕೆಲಸ ಆರಂಭ: 2 ಕೋಟಿ ರೂ. ನೀಡಿಕೆ
ಕಲ್ಬುರ್ಗಿ ನ. 17– ಮೇಲಣ ಕೃಷ್ಣಾ ಯೋಜನೆಯ ನಾಲೆ ಕೆಲಸ ಪ್ರಾರಂಭಿಸಲು ರಾಜ್ಯ ಸರ್ಕಾರ ಎರಡು ಕೋಟಿ ರೂಪಾಯಿ ಮಂಜೂರು ಮಾಡಿದೆ. ಒಂದು ವಾರದೊಳಗೆ ಕೆಲಸ ಆರಂಭವಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ನಾಲೆ ಕೆಲಸಕ್ಕಾಗಿ ರಚಿಸಲಿರುವ ಕಾರ್ಮಿಕ ಶಿಬಿರಗಳಿಗೆ ಕೊನೆಯ ಪಕ್ಷ 10 ಸಹಸ್ರ ಕಾರ್ಮಿಕರನ್ನು ಕಳುಹಿಸಲು ಜಿಲ್ಲಾಧಿಕಾರಿ ಶ್ರೀ ಬಾಲಸುಬ್ರಹ್ಮಣಿಯನ್‌ ಅವರು ತಾಲ್ಲೂಕು ಬೋರ್ಡ್‌ಗಳಿಗೆ ಮನವಿ ಮಾಡಿದ್ದಾರೆ. ಸರ್ಕಾರ ವ್ಯವಸ್ಥೆಗೊಳಿಸುವ ಈ ಶಿಬಿರಗಳಲ್ಲಿ ಧಾನ್ಯ ಪೂರೈಕೆ ಮತ್ತು ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ. ನಾಸಾ ಕೆಲಸದಲ್ಲಿ 10ರಿಂದ 15 ಸಹಸ್ರ ಜನರಿಗೆ ಉದ್ಯೋಗ ಒದಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.

ಸಿ.ಐ.ಎ ಚಟುವಟಿಕೆ ಹತ್ತಿಕ್ಕಲು ಬಲವಾದ ಗೂಢಚಾರ ಜಾಲ ರಚನೆಗೆ ರಾಜ್ಯಸಭೆ ಒತ್ತಾಯ
ನವದೆಹಲಿ, ನ. 17– ಸಿ.ಐ.ಎ. ಚಟುವಟಿಕೆಗಳನ್ನು ಪರಿಣಾಮಕರವಾಗಿ ಹತ್ತಿಕ್ಕಲು ಭಾರತೀಯ ಗೂಢಚಾರ ಜಾಲವನ್ನು ಬಲಪಡಿಸಬೇಕೆಂದು ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳೆರಡೂ ಇಂದು ರಾಜ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದವು.

ಭಾರತದಲ್ಲಿ ವಿದೇಶೀ ಗೂಢಚಾರ ಸಂಸ್ಥೆಗಳ ಚಟುವಟಿಕೆ ಕುರಿತ ನಿರ್ಣಯದ ಮೇಲೆ ಚರ್ಚೆ ಆರಂಭಿಸುವ ಸಂಸ್ಥಾ ಕಾಂಗ್ರೆಸ್‌ ಸದಸ್ಯ ಶಾಮಲಾಲ್‌ ಮಿಶ್ರಾ ಅವರು, ವಿದೇಶೀ ರಹಸ್ಯ ಕೈವಾಡ ತನಿಖೆಗಾಗಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಆಯೋಗ ಒಂದನ್ನು ರಚಿಸಬೇಕೆಂದು ಒತ್ತಾಯಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು