ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ‘ಬೆಳ್ಳಿ ದೊರೆ’ ಶ್ರೀನಿವಾಸ ಶೆಟ್ಟಿ ಸೇರಿ ಇಬ್ಬರ ಬಂಧನ

Published : 27 ಸೆಪ್ಟೆಂಬರ್ 2024, 20:42 IST
Last Updated : 27 ಸೆಪ್ಟೆಂಬರ್ 2024, 20:42 IST
ಫಾಲೋ ಮಾಡಿ
Comments

ಕಳ್ಳಸಾಗಣೆ: ನಗರದಲ್ಲಿ ‘ಬೆಳ್ಳಿ ದೊರೆ’ ಶ್ರೀನಿವಾಸ ಶೆಟ್ಟಿ ಸೇರಿ ಇಬ್ಬರ ಬಂಧನ

ಬೆಂಗಳೂರು, ಸೆ. 27– ‘ಬೆಳ್ಳಿ ದೊರೆ’ ಎಂದು ಹೇಳಲಾದವನೊಬ್ಬನೂ ಸೇರಿ, ನಗರದ ಪೊಲೀಸರು ಇಬ್ಬರು ಕಳ್ಳಸಾಗಣೆದಾರರನ್ನು ಆಂತರಿಕ ಸ್ಥಾನಬದ್ಧತಾ ಕಾಯ್ದೆ ರೀತ್ಯ ಇಂದು ಇಲ್ಲಿ ಬಂಧಿಸಿದರು.

ಒಬ್ಬನ ಹೆಸರು ಮನೊಭಾಯ್‌ ಷಾ (30) ಇನ್ನೊಬ್ಬನ ಹೆಸರು ಟಿ. ಶ್ರೀನಿವಾಸ ಶೆಟ್ಟಿ (44) ಎಂದು ಪೊಲೀಸರು ತಿಳಿಸಿದರು.

‘ಬೆಳ್ಳಿ ದೊರೆ’ ಎನ್ನಲಾದ ಶ್ರೀನಿವಾಸ ಶೆಟ್ಟಿ ನಗರದಲ್ಲಿ ಆಭರಣಗಳ ಅಂಗಡಿಯೊಂದರ ಮಾಲೀಕ. ಬಂಧಿತರಿಬ್ಬರನ್ನು ಸೆಂಟ್ರಲ್‌ ಜೈಲಿಗೆ ಕಳುಹಿಸಲಾಯಿತು. ನಿನ್ನೆ ಪೊಲೀಸರು ಆರು ಮಂದಿಯನ್ನು ಇದೇ ಆಪಾದನೆ ಮೇಲೆ ಬಂಧಿಸಿದರು.

ಮನೊಭಾಯ್‌ ಎಂಬುವನನ್ನು ಅವನ ಅಂಗಡಿಯಲ್ಲೂ ಶ್ರೀನಿವಾಸ ಶೆಟ್ಟಿಯನ್ನು ಬೇರೊಂದು ಕಡೆಯೂ ಬೆಳಗಿನ ಜಾವವೇ ಪೊಲೀಸರು ತಮ್ಮ ಬುಟ್ಟಿಗೆ
ಹಾಕಿಕೊಂಡರು.

ಗದಗ– ಬೆಂಗಳೂರು ಬಸ್‌ ಅಪಘಾತದಲ್ಲಿ ಏಳು ಮಂದಿ ಸಾವು

ತುಮಕೂರು, ಸೆ. 27– ಗದಗ– ಬೆಂಗಳೂರು ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಶುಕ್ರವಾರ ಬೆಳಗಿನ ಜಾವ ತುಮಕೂರಿಗೆ 15 ಮೈಲಿ ದೂರದ ಬಿಲ್ಲನಕುಂಟೆ ಬಳಿ ಮರಕ್ಕೆ ಡಿಕ್ಕಿ ಹೊಡೆದು ಏಳು ಮಂದಿ ಮೃತರಾಗಿ, ಏಳು ಮಂದಿ ಗಾಯಗೊಂಡರು.

ಮೃತರಲ್ಲಿ ಇಬ್ಬರು ವೈದ್ಯರಾದ ತಂದೆ ಮತ್ತು ಮಗ ಸೇರಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ರಾಮೇಶ್ವರಕ್ಕೆ ಯಾತ್ರೆ ಹೊರಟಿದ್ದರು. ಬಸ್‌ನಲ್ಲಿ 27 ಮಂದಿ
ಪ್ರಯಾಣಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT