ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಲ ಹೊರುವ ಹೇಯ ಪದ್ಧತಿ ರಾಜ್ಯದಲ್ಲಿ ಅಂತ್ಯ

Published 16 ಆಗಸ್ಟ್ 2023, 23:31 IST
Last Updated 16 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಶುಕ್ರವಾರ 17.8.1973


ರಾಜ್ಯ ರಾಜಕೀಯ ಸಮಸ್ಯೆ ಪ್ರಧಾನಿವರೆಗೆ ಒಯ್ಯದೇ ಇಲ್ಲೇ ಪರಿಹರಿಸಲು ಯತ್ನ

ಬೆಂಗಳೂರು, ಆ. 16– ಉದ್ಭವವಾಗಬಹುದಾದ ರಾಜಕೀಯ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲೇ ಪರಿಹರಿಸಲು ಪ್ರಯತ್ನಿಸಿ ಪ್ರಧಾನಿಗೆ ತೊಂದರೆ ಕೊಡದಿರುವ ನೀತಿಯನ್ನು ಮುಖ್ಯಮಂತ್ರಿ ಶ್ರೀ ಅರಸು ಅವರು ಅನುಸರಿಸಿಕೊಂಡು ಬಂದಿದ್ದಾರೆ.

‘ರಾಜ್ಯದ ರಾಜಕೀಯ ಸಮಸ್ಯೆಗಳನ್ನು ಅವರಿಗೆ ಒಡ್ಡದಿರುವವರು ನೀವು ಒಬ್ಬರೆ ಎಂದು ಪ್ರಧಾನಿ ನಿಮಗೆ ಮೆಚ್ಚುಗೆ ವ್ಯಕ್ತಪಡಿಸಿದರೆ?’ ಎಂದು ವರದಿಗಾರರೊಬ್ಬರು ಕೇಳಿದಾಗ, ಪ್ರಧಾನಿ ಅವರನ್ನು ಕಂಡು ಬೆಳಿಗ್ಗೆ ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಗಳು ‘ಸಾಮಾನ್ಯವಾಗಿ ರಾಜ್ಯದ ಸಮಸ್ಯೆಗಳನ್ನು ಪ್ರಧಾನಿಗೆ ಒಡ್ಡುವುದಿಲ್ಲ. ಇಲ್ಲೇ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಗತ್ಯ ಬಿದ್ದರೆ ಮಾತ್ರ ಹೈಕಮಾಂಡಿನ ಸಹಾಯವನ್ನು ಪಡೆಯುತ್ತೇನೆ. ಸಾಮಾನ್ಯವಾಗಿ ಇಲ್ಲೇ ನಾವೇ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದರು.

ಮಲ ಹೊರುವ ಹೇಯ ಪದ್ಧತಿ ರಾಜ್ಯದಲ್ಲಿ ಅಂತ್ಯ

ಬೆಂಗಳೂರು, ಆ. 16– ಶತಮಾನಗಳಿಂದ ಮಾನವ ಗೌರವಕ್ಕೆ ಕಳಂಕವಾಗಿದ್ದ ಮಲ ಹೊರುವ ಪದ್ಧತಿ ಆಗಸ್ಟ್‌ 15ರಿಂದ ರದ್ದಾಗಿ, ಮೈಸೂರು ರಾಜ್ಯ ಒಂದು ಐತಿಹಾಸಿಕ ಹಾಗೂ ಸ್ಮರಣೀಯ ಹೆಜ್ಜೆಯನ್ನಿಟ್ಟಿದೆ.

ಈ ಅನಾಗರೀಕ ಪದ್ಧತಿಯ ನಿರ್ಮೂಲನಕ್ಕಾಗಿ ಕ್ರಮ ಕೈಗೊಂಡುದು ಇಡೀ ಭಾರತದಲ್ಲಿ ರಾಜ್ಯ ಸರ್ಕಾರ ಪ್ರಥಮವಾದುದು.

ಜಾಡಮಾಲಿಗೆ ಬದಲಾಗಿ ‘ಪೌರ ಕಾರ್ಮಿಕ’ ಎಂಬ ಹೊಸ ಗೌರವಾನ್ವಿತ ನಾಮಕರಣ ಹೊಂದಿರುವ ಇವರು ನಿನ್ನೆಯಿಂದ ಮಲ ತೆಗೆಯುವ ಕೆಲಸಕ್ಕೆ ಹೋಗುತ್ತಿಲ್ಲ. ಈ ಪದ್ಧತಿಯ ನಿರ್ಮೂಲನದ ಜೊತೆಗೆ ಎಲ್ಲ ನಗರಗಳಲ್ಲೂ ಪ್ಲಷ್‌ ಔಟ್ ಕಕ್ಕಸ್ಸುಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT