ಭಾನುವಾರ, ನವೆಂಬರ್ 28, 2021
20 °C

50 ವರ್ಷಗಳ ಹಿಂದೆ: ಸೋಮವಾರ 18.10.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿಯಿಂದ ಭಾರತ ಸೇನೆ ವಾಪಸಾಗದು

ಜಲಂಧರ್, ಅ. 17– ಬಾಂಗ್ಲಾದೇಶದ ಸಮಸ್ಯೆ ಇತ್ಯರ್ಥವಾಗುವವರೆಗೆ ಗಡಿಯಲ್ಲಿ ರುವ ತನ್ನ ಸೈನ್ಯವನ್ನು ಭಾರತ ಹಿಂತೆಗೆದುಕೊಳ್ಳುವುದಿಲ್ಲವೆಂದು ರಕ್ಷಣಾ ಮಂತ್ರಿ ಶ್ರೀ ಜಗಜೀವನ ರಾಂ ಅವರು ಇಂದು ಹೇಳಿದರು.

ಇಲ್ಲಿಗೆ 20 ಕಿಲೊ ಮೀಟರುಗಳ ದೂರ ದಲ್ಲಿರುವ ಕಪೂರ್ತಲದಲ್ಲಿ ರಾಜಕೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಕ್ಷಣಾ ಸಚಿವರು, ‘ಈ ಸಂಬಂಧದಲ್ಲಿ ಯಾವುದೇ ಅಂತರರಾಷ್ಟ್ರೀಯ ಒತ್ತಡವನ್ನು ವಿರೋಧಿಸಲು ರಾಷ್ಟ್ರ ಸ್ಥಿರ ಸಂಕಲ್ಪ ಮಾಡಿದೆ’ ಎಂದರು.

‘ಭಾರತದ ಮೇಲೆ ಯುದ್ಧ ಹೇರಿದಲ್ಲಿ ಪಾಕಿಸ್ತಾನದ ಪ್ರದೇಶದಿಂದ ತನ್ನ ಸೈನ್ಯವನ್ನು ಭಾರತ ಹಿಂತೆಗೆದುಕೊಳ್ಳುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು