ಶನಿವಾರ, ಮೇ 28, 2022
31 °C

50 ವರ್ಷಗಳ ಹಿಂದೆ: ಬುಧವಾರ 19–4–1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಜನ್ ವರದಿ ಬಗ್ಗೆ ಸಂಸತ್ತಿನದೇ ಅಂತಿಮ ತೀರ್ಮಾನ: ಅರಸು

ಬೆಂಗಳೂರು, ಏ. 18– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಪರಿಹಾರಕ್ಕೆ ಮಹಾಜನ್ ವರದಿಯನ್ನು ಮುಂದಿಟ್ಟು
ಕೊಂಡಿರುವ ಸಂಸತ್ತಿನದೇ  ಅಂತಿಮ ನುಡಿ ಎಂದು ಮುಖ್ಯಮಂತ್ರಿ ದೇವರಾಜ ಅರಸು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.

‘ಈ ಪ್ರಶ್ನೆಯ ಪರಿಹಾರದ ಹೊಣೆಯನ್ನು ಪ್ರಧಾನಿಯವರಿಗೆ ಬಿಟ್ಟಿಲ್ಲ’ ಎಂದು ಸದಸ್ಯರ ಸಂದೇಹಗಳನ್ನು ನಿವಾರಿಸಿದ ಮುಖ್ಯಮಂತ್ರಿ ಅವರು ‘ಅಂತಿಮ ತೀರ್ಪಿನ ಅಧಿಕಾರ ಪಾರ್ಲಿಮೆಂಟ್‌ಗೆ ಬಿಟ್ಟಿದ್ದು, ಕಾದು ನೋಡೋಣ’ ಎಂದರು.

ರಾಸಾಯನಿಕ ಗೊಬ್ಬರ ಬಳಕೆ ಬಗ್ಗೆ ಶೀಘ್ರವೇ ಕಾಯಿದೆ ಜಾರಿ

ಬೆಂಗಳೂರು, ಏ. 18– ರಾಸಾಯನಿಕ ಗೊಬ್ಬರ ಬಳಕೆ ಮತ್ತು ವಹಿವಾಟು ಸಂಬಂಧದಲ್ಲಿ ಕಾಯಿದೆಯೊಂದು ಕಾರ್ಯ
ಗತವಾಗುವ ಸಂಭವವಿದೆ.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸಬೇಕೆಂಬ ನಿರ್ಣಯದ ಮೇಲೆ ವಿಧಾನಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದಾಗ
ಪಶುಪಾಲನೆ ರಾಜ್ಯ ಸಚಿವ ಎನ್. ಚಿಕ್ಕೇಗೌಡ ಅವರು ಇಂದು ಮಧ್ಯಪ್ರವೇಶಿಸಿ, ‘ರಾಸಾಯನಿಕ ಗೊಬ್ಬರ ಕಾಯಿದೆಯೊಂದನ್ನು ತೀವ್ರವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಿರುವುದಾಗಿ’ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.