ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ | ಭಾರತದ ಬಲವರ್ಧನೆಗೆ ವಿದೇಶಗಳ ಅಸಹನೆ: ಪ್ರಧಾನಿಯ ವಿಷಾದ

Published 2 ಜೂನ್ 2024, 23:52 IST
Last Updated 2 ಜೂನ್ 2024, 23:52 IST
ಅಕ್ಷರ ಗಾತ್ರ

ಶಿಮ್ಲಾ, ಜೂನ್ 2– ಭಾರತವು ದುರ್ಬಲವಾಗಿ ದ್ದಾಗ ನೆರವು ನೀಡಲು ಮುಂದೆ ಬರುತ್ತಿದ್ದ ಕೆಲವು ದೇಶಗಳು ಈಗ ಅದು ಪ್ರಬಲ ರಾಷ್ಟ್ರವಾಗಲು ಕ್ರಮ ಕೈಗೊಳ್ಳುತ್ತಿರುವುದನ್ನು ಸಹಿಸುತ್ತಿಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ವಿಷಾದಿಸಿದರು. 

ಕಳೆದ ತಿಂಗಳು ಅಣುಸ್ಫೋಟ ನಡೆಸಿದ್ದ ಕ್ಕಾಗಿ ‘ಭಾರತಕ್ಕೆ ನೆರವು ನಿಲ್ಲಿಸುವುದಾಗಿ’ ಈ ದೇಶಗಳು ಬೊಬ್ಬೆ ಹಾಕುತ್ತಿರುವುದನ್ನು ಅವರು ಪ್ರಸ್ತಾಪಿಸಿ ‘ಅಣುಬಾಂಬ್‌ ತಯಾರಿಕೆ ಇಲ್ಲ’ ಎಂಬ ಸರ್ಕಾರದ ನೀತಿಯನ್ನು ಪುನರ್‌ ಸ್ಪಷ್ಟಪಡಿಸಿದರು.

ಅಂದ ಮಾತ್ರಕ್ಕೆ ಕೈಗಾರಿಕೆಯನ್ನು ಅಧುನೀಕರಿಸಿ, ಪ್ರಗತಿ ವೇಗವನ್ನು ಹೆಚ್ಚಿಸುವುದಕ್ಕೆ ಅಗತ್ಯವಾದ ಆಧುನಿಕ ತಂತ್ರಜ್ಞಾನವನ್ನು ನಾವು ಪಡೆಯಬಾರದು ಎಂದರ್ಥವಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT