ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಪ್ರಜಾಸತ್ತೆಗೆ ವಿನಾಶಕಾಲ: ಜೆ.ಪಿ.

Published 31 ಮಾರ್ಚ್ 2024, 23:53 IST
Last Updated 31 ಮಾರ್ಚ್ 2024, 23:53 IST
ಅಕ್ಷರ ಗಾತ್ರ

ದೊಡ್ಡ ನಗರಗಳಲ್ಲಷ್ಟೇ ಸರ್ಕಾರಿ ಆಹಾರ ವಿತರಣೆ; ಸಲಹೆ ಬಗ್ಗೆ ಪರಿಶೀಲನೆ

ನವದೆಹಲಿ, ಮಾರ್ಚ್‌ 31– ಸರ್ಕಾರದಿಂದಲೇ ಆಹಾರಧಾನ್ಯಗಳ ಹಂಚಿಕೆ ವ್ಯವಸ್ಥೆಯನ್ನು ಕೈಗಾರಿಕಾ ಪ್ರದೇಶಗಳು ಮತ್ತು ಒಂದು ನಿರ್ದಿಷ್ಟ ಪ್ರಮಾಣದ ಜನಸಂಖ್ಯೆ ಇರುವ ಕೆಲವು ನಗರಗಳಿಗಷ್ಟೇ ಸೀಮಿತಗೊಳಿಸಿ ಉಳಿದೆಲ್ಲಾ ಪ್ರದೇಶಗಳನ್ನೂ ಎಂದಿನ ವ್ಯಾಪಾರ ವ್ಯವಸ್ಥೆಗೆ ಒಳಪಡಿಸುವ ಸಲಹೆಗಳನ್ನು ಸರ್ಕಾರ ಈಗ ಪರಿಶೀಲಿಸುತ್ತಿರುವುದೆಂದು ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತಿಳಿಸಿದರು.

ಹೊಸ ಗೋಧಿ ನೀತಿ ಕುರಿತು ಇಂದು ರಾತ್ರಿ ರೇಡಿಯೊ ಸಂದರ್ಶನದಲ್ಲಿ ವಿವರಣೆ ನೀಡಿದ ಅಹ್ಮದ್ ಅವರು, ಇಡೀ ಜನಸಂಖ್ಯೆಯಲ್ಲಿ ದುರ್ಬಲವರ್ಗದ ಅಗತ್ಯ ಪೂರೈಕೆಯೇ ಹೊಸ ನೀತಿಯ ಮುಖ್ಯ ಉದ್ದೇಶವಾಗಿರುವುದೆಂದು ಹೇಳಿದರು.

ಪ್ರಜಾಸತ್ತೆಗೆ ವಿನಾಶಕಾಲ: ಜೆ.ಪಿ.

ಪುಣೆ, ಮಾರ್ಚ್‌ 31– ‘‘ಪ್ರಸಕ್ತ ಪರಿಸ್ಥಿತಿಯಲ್ಲಿ ಭಾರತದ ಪ್ರಜಾಸತ್ತೆ ವಿನಾಶದ ಅಂಚಿನತ್ತ ಸಾಗುತ್ತಿದೆ. ಗೊಂದಲಮಯ ಪರಿಸ್ಥಿತಿ, ಉದ್ದೇಶರಹಿತ ಕಾರ್‍ಯಕ್ರಮಗಳು, ಸೂಕ್ತ ಮಾರ್ಗದರ್ಶನದ ಕೊರತೆ, ಸರ್ಕಾರದ ಮತ್ತು ರಾಜಕೀಯ ರಂಗದ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ– ಇವೆಲ್ಲ ಪ್ರಧಾನಿ ಇಂದಿರಾ ಗಾಂಧಿಯವರ ನಾಯಕತ್ವದ ಲಕ್ಷಣಗಳಿರಬಹುದು. ಆದರೆ ಇವೆಲ್ಲ ಕಾಂಗ್ರೆಸ್ಸನ್ನು, ಪ್ರಜಾಸತ್ತೆಯನ್ನೂ ವಿನಾಶದ ಅಂಚಿಗೆ ದೂಡುತ್ತಿವೆ’’.

ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದವರು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT