ಶುಕ್ರವಾರ, ಸೆಪ್ಟೆಂಬರ್ 24, 2021
23 °C

50 ವರ್ಷಗಳ ಹಿಂದೆ: ಗುರುವಾರ 19–8–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಜತೆ ಯುದ್ಧದ ಮಾತು ಸಲ್ಲದು– ಯುಹ್ಯಾಗೆ ರಷ್ಯಾ ಎಚ್ಚರಿಕೆ: ಬಂಗ್ಲಾ ಸಮಸ್ಯೆ ಇತ್ಯರ್ಥ ಮುಜೀಬ್ ಬಿಡುಗಡೆಗೆ ಒತ್ತಾಯ

ನವದೆಹಲಿ, ಆ–18: ಪಾಕಿಸ್ತಾನದ ಆಡಳಿತ ವರ್ಗವು ಪದೇ ಪದೇ ಹಾಕುತ್ತಿರುವ ಸಮರ ಬೆದರಿಕೆಗಳ ಬಗ್ಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿ, ಪಾಕಿಸ್ತಾನ ಸರ್ಕಾರದ ಈ ಧೋರಣೆಯನ್ನು ಖಂಡಿಸುವ ಸಂದೇಶವೊಂದನ್ನು ಸೋವಿಯತ್ ಸರ್ಕಾರ ಅಧ್ಯಕ್ಷ ಯಹ್ಯಾಖಾನರಿಗೆ ಕಳಿಸಿದೆ.

ಭಾರತದ ಜತೆ ಯುದ್ಧ ನಡೆಸುವುದರಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳ ಬಗ್ಗೆ ಸೋವಿಯತ್ ಯೂನಿಯನ್ ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದೆ.

ಒಂದು ಕೋಟಿ ವೆಚ್ಚದಲ್ಲಿ ಸಂಸ್ಕೃತ– ಇಂಗ್ಲಿಷ್ ನಿಘಂಟು

ಪುಣೆ, ಆ. 18– ಸಂಸ್ಕೃತ– ಇಂಗ್ಲಿಷ್ ಬೃಹತ್ ನಿಘಂಟುನ್ನು ಪ್ರಕಟಿಸುವ ಒಂದು ಕೋಟಿ ರೂ. ವೆಚ್ಚದ ಸ್ಮರಣೀಯ ಯೋಜನೆಯೊಂದನ್ನು ಡೆಕ್ಕನ್ ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ಕೈಗೊಂಡಿದೆ. ಇದು, ಈವರೆಗೆ ವಿಶ್ವದಲ್ಲಿ ಪ್ರಕಟಿಸಲಾಗಿರುವ ಎಲ್ಲ ಸಂಸ್ಕೃತ–ಇಂಗ್ಲಿಷ್ ನಿಘಂಟುಗಳಿಗಿಂತ ಹೆಚ್ಚು ಪದ–ಅರ್ಥಗಳನ್ನೊಳಗೊಂಡಿರುತ್ತದೆ.

ಭಾರತ ಮತ್ತು ವಿದೇಶಗಳಲ್ಲಿನ ಸಂಸ್ಕೃತ ವಿದ್ವಾಂಸರ ಸಕ್ರಿಯ ಸಹಕಾರದಿಂದ ಈ ನಿಘಂಟನ್ನು ಪ್ರಕಟಿಸಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು