ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ನಾಲ್ವರ ಮತಾಂತರ, ಮೇಲ್ಮನೆಗೆ ಎರಡೂ ಕಾಂಗ್ರೆಸಿಗರ ಆಯ್ಕೆ

Published 9 ಮೇ 2024, 22:26 IST
Last Updated 9 ಮೇ 2024, 22:26 IST
ಅಕ್ಷರ ಗಾತ್ರ

ನಾಲ್ವರ ಮತಾಂತರ, ಮೇಲ್ಮನೆಗೆ ಎರಡೂ ಕಾಂಗ್ರೆಸಿಗರ ಆಯ್ಕೆ

ಬೆಂಗಳೂರು, ಮೇ 9– ಅತ್ಯಧಿಕ ಮತ ಗಳಿಸಿದ ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ ಹಾಗೂ ಉಳಿದ ಎಲ್ಲ ಆರುಮಂದಿ ಕಾಂಗ್ರೆಸ್‌ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದ ನಾಲ್ಕು ಮತಗಳು ಹೊರಕ್ಕೆ ಹೋಗಿರುವುದೇ ಅಲ್ಲದೆ, ಪಕ್ಷದ ಅಭ್ಯರ್ಥಿಗಳ ನಡುವೆಯೂ ಸ್ವಲ್ಪ ಮಟ್ಟಿಗೆ ಮತಾಂತರ ನಡೆದಿದೆ.

ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ 33, ಕಾಂಗ್ರೆಸ್ಸಿನ ಎಫ್‌.ಎಂ. ಖಾನ್‌ 30, ಕಲ್ಯಾಣರಾವ್‌ ಮರುಗುತ್ತಿ 28, ರಾಘವೇಂದ್ರರಾವ್‌ ಜಾಗೀರ್‌ದಾರ್‌ 27 ಹಾಗೂ ಎಸ್‌. ಶಿವಪ್ಪ 27 ಪ್ರಥಮ ಮತಗಳನ್ನು ಗಳಿಸಿ ಮೊದಲಿನ ಸುತ್ತಿನಲ್ಲೇ ಆಯ್ಕೆಯಾದರು. 

ಅಕ್ಕಿ–ಭತ್ತದ ಅಂತರಜಿಲ್ಲಾ ಸಾಗಾಣಿಕೆ ನಿರ್ಬಂಧ ರದ್ದಾಗದು

ಬೆಂಗಳೂರು, ಮೇ 90 – ರಾಜ್ಯದ ಹಿತದೃಷ್ಟಿಯಿಂದ ಅಂತರ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ಪ್ರತಿಬಂಧಿಸುವ ಪರಿಸ್ಥಿತಿ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶ್ರೀ ಬಿ.ವಿ. ಕಕ್ಕಿಲ್ಲಾಯ ಅವರು ಕಳುಹಿಸಿದ್ದ ಗಮನ ಸೆಳೆಯುವ ನೋಟಿಸಿಗೆ ಉತ್ತರಿಸಿದ ಆಹಾರ ಸಚಿವ ಶ್ರೀ ಕೆ.ಎಚ್‌. ಪಾಟೀಲರು ಅಂತರ್‌ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ನಿರ್ಬಂಧ ತೆಗೆದುಹಾಕಬಹುದೆಂಬ ಪ್ರಶ್ನೆಯನ್ನು ಸರ್ವದೃಷ್ಟಿಯಿಂದ ಆಲೋಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT