ಭಾರತ ಯಾವುದೇ ವಿದೇಶಿ ರಾಷ್ಟ್ರವನ್ನು ಅವಲಂಬಿಸಿರುವ ಟೀಕೆ ನಿರಾಧಾರ: ಇಂದಿರಾ

ಚಂಡೀಗಡ, ನ. 6– ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರವನ್ನೂ ಭಾರತ ಅವಲಂಬಿಸಿಲ್ಲವೆಂದು ಇಲ್ಲಿ ಇಂದು ಸ್ಪಷ್ಟಪಡಿಸಿದ ಪ್ರಧಾನಿ ಇಂದಿರಾ ಗಾಂಧಿ ಅವರು, ತನ್ನ ಹಿತಕ್ಕನುಗುಣವಾದ ಸ್ವತಂತ್ರ ನೀತಿಗಳನ್ನು ಭಾರತ ಅನುಸರಿಸುತ್ತಿದೆ ಎಂದರು.

‘ವಿದೇಶಿ ಶಕ್ತಿಶಾಲಿ ರಾಷ್ಟ್ರವೊಂದರ ಮೇಲೆ ಭಾರತ ವಿಪರೀತ ಅವಲಂಬಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಆದರೆ, ಅದು ನಿರಾಧಾರವಾದದ್ದು’ ಎಂದು ಅವರು ಹರಿಯಾಣ ಮುಖ್ಯಮಂತ್ರಿ ಬನ್ಸಿಲಾಲ್ ಅವರ ನಿವಾಸದಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಡದ ಆಡಳಿತ ಕಾಂಗ್ರೆಸ್ಸಿಗರ ಸಭೆಯಲ್ಲಿ ತಿಳಿಸಿದರು.

ಈ ಪ್ರಚಾರ ಸಮರದಲ್ಲಿ ಆಡಳಿತ ಕಾಂಗ್ರೆಸ್ಸಿಗರು ಸದಾ ಸ್ವರಕ್ಷಣೆಯಲ್ಲೇ ಇರದೆ ಅವರೂ ಮುಂದಾಗಿ ನಿಜವಾದ ವಿಚಾರ ವಿವರಿಸಬೇಕೆಂದರು.

ನ್ಯಾಯ ದೊರಕಿಸಲು ಕೊನೆತನಕ ಹೋರಾಟ

ಮಂಗಳೂರು, ನ. 6– ‘ಕಾಸರಗೋಡು ಮತ್ತು ಬೆಳಗಾವಿ ನನ್ನ ವೈಯಕ್ತಿಕ ಆಸ್ತಿ ಅಲ್ಲ. ಅವು ಈ ರಾಜ್ಯದ ಪ್ರಜೆಗಳದು. ಪ್ರಜೆಗಳಿಗೆ ನ್ಯಾಯ ದೊರೆಯುವಂತೆ ಕೊನೆತನಕ ಹೋರಾಡುತ್ತೇನೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.