ಶುಕ್ರವಾರ, ಜನವರಿ 28, 2022
25 °C

50 ವರ್ಷಗಳ ಹಿಂದೆ: ಶನಿವಾರ 23.10.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ. 1ರಂದು ಜಿಲ್ಲಾಮಟ್ಟದಲ್ಲಿ ಕನ್ನಡ ಆಡಳಿತ ಭಾಷೆ ಎಂದು ಸಾರಲು ಕರೆ

ಬೆಂಗಳೂರು, ಅ. 22– ನವೆಂಬರ್ ಒಂದರಂದು (ರಾಜ್ಯೋತ್ಸವದಂದು) ಕನ್ನಡ ಜನತೆಯ ಬಯಕೆಯನ್ನು ಗಮನಿಸಿ ಜಿಲ್ಲಾ ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣ ಅವರು ರಾಜ್ಯಪಾಲ ಶ್ರೀ ಧರ್ಮವೀರ ಅವರನ್ನು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘ಕನ್ನಡನಾಡು ಇನ್ನು ಪೂರ್ಣವಾಗಿ ಒಂದಾಗಿಲ್ಲ– ಹೊರನಾಡಿನ ಕನ್ನಡಿಗರ ಸ್ಥಿತಿಗತಿ ತೃಪ್ತಿಕರವಾಗಿಲ್ಲ’ ಎಂದೂ ಅವರು ಹೇಳಿದ್ದಾರೆ.

ಶಾಲಾ ಶಿಕ್ಷಕರಿಗೆ ಪ್ರಶಸ್ತಿ ನೀಡಿಕೆಗೆ ಸರ್ಕಾರದ ಒಪ್ಪಿಗೆ

ಬೆಂಗಳೂರು, ಅ. 22– ರಾಜ್ಯದ ಪ್ರಾಥಮಿಕ ಹಾಗೂ ಸೆಕೆಂಡರಿ ಶಾಲಾ ಶಿಕ್ಷಕರಿಗೆ 1971–72ನೇ ಸಾಲಿನ ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರ ತನ್ನ ಒಪ್ಪಿಗೆಯನ್ನು ನೀಡಿದೆ.

ಈ ವಿಚಾರವನ್ನು ಇಂದು ವರದಿಗಾರರಿಗೆ ತಿಳಿಸಿದ ರಾಜ್ಯಪಾಲ ಶ್ರೀ ಧರ್ಮವೀರ ಅವರು ಪ್ರಶಸ್ತಿ ಪಡೆಯುವ ಶಿಕ್ಷಕರಿಗೆ 300 ರೂ. ನಗದು ಹಾಗೂ ಸರ್ಟಿಫಿಕೇಟುಗಳನ್ನು ನೀಡಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು