ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಸೋಮವಾರ, ಜೂನ್‌ 7, 1971

Last Updated 6 ಜೂನ್ 2021, 19:30 IST
ಅಕ್ಷರ ಗಾತ್ರ

ಹೈಯರ್‌ ಸೆಕೆಂಡರಿ ಶಾಲೆಗಳಲ್ಲಿ ಪಿ.ಯು.ಸಿ. ಬೋಧನೆಗೆ ವಿಶೇಷ ಭತ್ಯೆ: ಅಧ್ಯಾಪಕರ ಆಗ್ರಹ

ಬೆಂಗಳೂರು ಜೂನ್ 6– ಹೈಯರ್‌ ಸೆಕೆಂಡರಿ ಶಾಲೆಗಳಲ್ಲಿ ಹೊಸ ಪಿ.ಯು.ಸಿ.ಯ ಪ್ರಥಮ ವರ್ಷದ ತರಗತಿಗಳನ್ನೆತ್ತಿಕೊಳ್ಳುವ ಶಿಕ್ಷಕರಿಗೆ ವಾರಕ್ಕೆ ತಲಾ ಒಂದು ತರಗತಿಗೆ ತಿಂಗಳಿಗೆ 20 ರೂಪಾಯಿಗಳ ಭತ್ಯೆ ನೀಡಬೇಕು ಎಂದು ಹೈಯರ್‌ ಸೆಕೆಂಡರಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಉಪಾಧ್ಯಾಯರುಗಳ ಸಭೆಯು ಸರ್ಕಾರವನ್ನು ಒತ್ತಾಯಪಡಿಸಿದೆ.

ಈ ವರ್ಷದಿಂದ ಜಾರಿಗೆ ಬರಲಿರುವ ಎರಡು ವರ್ಷಗಳ ಪಿ.ಯು.ಸಿ.ಯ ತರಗತಿಗಳನ್ನು ಹೈಯರ್‌ ಸೆಕೆಂಡರಿ ಶಾಲಾ ಶಿಕ್ಷಕರೂ ಹಲವು ಪ್ರಸಂಗಗಳಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ ಅವರ ಶ್ರಮಕ್ಕೆ ಸೂಕ್ತ ಪರಿಹಾರ ಅಗತ್ಯ ಎಂದು ಸಭೆ ಅಭಿಪ್ರಾಯಪಟ್ಟಿತು.

ಹೊಸ ಸೋಷಲಿಸ್ಟ್‌ ಪಕ್ಷ ಸೇರಲು ಕಾಂಗ್ರೆಸ್‌(ಸಂ) ಯುವಜನರ ಯತ್ನ

ನವದೆಹಲಿ, ಜೂನ್ 6– ಪ್ರಜಾ ಸೋಷಲಿಸ್ಟ್‌ ಮತ್ತು ಸಂಯುಕ್ತ ಸೋಷಲಿಸ್ಟ್‌ ಪಕ್ಷಗಳು ವಿಲೀನವಾಗಿ ಒಂದೇ ಒಂದು ಸಮಾಜವಾದಿ ಪಕ್ಷವಾಗುವ ನಿರೀಕ್ಷೆ ಇರುವ ಈ ಸಮಯದಲ್ಲಿ, ಈ ಹೊಸ ಪಕ್ಷದೊಡನೆ ಮಾತುಕತೆ ನಡೆಸಲು ಸಂಸ್ಥಾ ಕಾಂಗ್ರೆಸ್ಸಿನಲ್ಲಿನ ಕೆಲ ಮಂದಿ ಯುವಜನರು ತಮ್ಮ ತಮ್ಮಲ್ಲೇ ಬೆಂಬಲವನ್ನು ಸಂಘಟಿಸುತ್ತಿದ್ದಾರೆ.

ಈ ಮಾತುಕತೆಗಳು ಸಂಸ್ಥಾ ಕಾಂಗ್ರೆಸ್ಸಿನ ಒಂದು ವರ್ಗದವರು ಹೊಸ ಪಕ್ಷದೊಡನೆ ಸೇರಲು ಅವಕಾಶ ಮಾಡಿಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT