ಮಂಗಳವಾರ, ಅಕ್ಟೋಬರ್ 26, 2021
20 °C

50 ವರ್ಷಗಳ ಹಿಂದೆ: ಶುಕ್ರವಾರ 8–10–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ದಮನ ಯಾರಿಂದಲೂ ಸಾಧ್ಯವಿಲ್ಲ: ಇಂದಿರಾ

ಚಂಡೀಗಡ, ಅ. 7– ಭಾರತವನ್ನು ದಮನ ಮಾಡುವುದಾಗಲಿ, ಅದನ್ನು ಹಿಂದಿನ ಸಾಲಿಗೆ ತಳ್ಳುವುದಾಗಲಿ ಈ ಭೂಮಿಯ ಮೇಲಣ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಘೋಷಿಸಿದರು.

‘ಎಲ್ಲ ಅಪಾಯಗಳನ್ನೂ ನಾವು ಒಗ್ಗಟ್ಟಿನಿಂದ ಎದುರಿಸುತ್ತೇವೆ. ವಿವಿಧ ಎಡರುತೊಡರುಗಳನ್ನು ದಾಟಿ ಮುನ್ನಡೆಯುತ್ತೇವೆ’ ಎಂದೂ ಅವರು ನುಡಿದರು. 

ಆಡಳಿತ ಕಾಂಗ್ರೆಸ್‌ ಸ್ಥಾನ ಈಗ ಮತ್ತಷ್ಟು ಭದ್ರ: ಕಾರ್ಯದರ್ಶಿಗಳ ಸಮೀಕ್ಷೆ

ಶಿಮ್ಲಾ, ಅ. 7– ಚುನಾವಣೆಯ ಕಾಲದಲ್ಲಿ ನೀಡಲಾದ ಆಶ್ವಾಸನೆಗಳನ್ನು ಶೀಘ್ರಗತಿಯಲ್ಲಿ ಜಾರಿಗೆ ತಂದದ್ದು, ರಾಜಸ್ಥಾನ, ಬಿಹಾರ ಮತ್ತು ಆಂದ್ರ ಪ್ರದೇಶಗಳಲ್ಲಿ ರಾಜಕೀಯ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದು ಹಾಗೂ ಪಕ್ಷದ ಆಡಳಿತ ಯಂತ್ರವನ್ನು ಏಕಮುಖಗೊಳಿಸಲು ಕೈಗೊಂಡ ಸತ್ವ ಪೂರ್ಣ ಕ್ರಮಗಳು ಆಡಳಿತ ಕಾಂಗ್ರೆಸ್‌ ಪಕ್ಷ ತನ್ನ ಸ್ಥಾನವನ್ನು ಲೋಕಸಭೆ ಚುನಾವಣೆಯಲ್ಲಿ ಭಾರೀ ವಿಜಯ ಗಳಿಸಿದ ನಂತರ ಮತ್ತಷ್ಟು ಭದ್ರಪಡಿಸಿಕೊಳ್ಳಲು ಸಹಾಯಕವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು