ನವದೆಹಲಿ, ಸೆ.21– ಕಳ್ಳಸಾಗಣೆದಾರರ ವಿರುದ್ಧ ಸರ್ಕಾರ ಈಗ ಕೈಗೊಂಡಿರುವ ಉಗ್ರಕ್ರಮ ಕಡೆಯ ತನಕ ಮುಂದುವರಿಯುವುದು ಎಂದು ಕೇಂದ್ರ ಹಣಕಾಸು ಖಾತೆ ಸ್ಟೇಟ್ ಸಚಿವ ಕೆ.ಆರ್.ಗಣೇಶ್ ಅವರು ಇಂದು ಘೋಷಿಸಿದರು.
ಹಲವು ವರ್ಷಗಳಿಂದ ಸಾಗಾಣೆದಾರರು ರಚಿಸಿಕೊಂಡಿರುವ ವ್ಯಾಪಕ ಮತ್ತು ಸಶಕ್ತ ಜಾಲವನ್ನು ಭೇಧಿಸಲು ಮತ್ತು ಕಳ್ಳಸಾಗಣೆ ಕಾರ್ಯಚರಣೆ ಪತ್ತೆಹಚ್ಚಲು ಗೂಢಚರ ಸಂಸ್ಥೆ, ಸುಂಕದಕಟ್ಟೆ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಸಂಘಟಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.