ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬೇಂದ್ರೆಗೆ ಜ್ಞಾನಪೀಠ ಪ್ರಶಸ್ತಿ

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೇಂದ್ರೆಗೆ ಜ್ಞಾನಪೀಠ ಪ್ರಶಸ್ತಿ

ನವದೆಹಲಿ, ಏ. 7– ಕನ್ನಡದ ಹಿರಿಯ ಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಒರಿಯಾ ಕಾದಂಬರಿಕಾರ ಶ್ರೀ ಗೋಪಿನಾಥ ಮಹಂತಿ ಅವರಿಗೆ 1973ರ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.

78 ವರ್ಷ ವಯಸ್ಸಿನ ಡಾ. ಬೇಂದ್ರೆ ಅವರ ‘ನಾಕು ತಂತಿ’ (44 ಕವನಗಳ ಸಂಕಲನ) ಮತ್ತು 60 ವರ್ಷ ವಯಸ್ಸಿನ ಮಹಂತಿ ಅವರ ‘ಮಾಟಿ ಮಟಲ್‌’ ಕೃತಿಗಳಿಗೆ ನೀಡಲಾಗಿರುವ ಈ ಪ್ರಶಸ್ತಿಯನ್ನು ಇಬ್ಬರಿಗೂ ಹಂಚಲಾಗಿದೆ. ಹೀಗೆ ಈ ಪ್ರಶಸ್ತಿ ಹಂಚಿಕೆ ಆಗುತ್ತಿರುವುದು ಇದು ಎರಡನೇ ಬಾರಿ.

ಪುಣೆಯಲ್ಲಿ ಹಲ್ಲೆ, ಇರಿತ, ಗೋಲಿಬಾರ್‌: ಇಬ್ಬರಿಗೆ ಗಾಯ

ಪುಣೆ, ಏ. 7– ಪುಣೆ ನಗರದ ಭವಾನಿಪೇಟೆ ಪ್ರದೇಶದಲ್ಲಿ ಇಂದು ರಾತ್ರಿ ಉದ್ರಿಕ್ತ ಜನರ ಗುಂಪು ಚದುರಿಸಲು ಪೊಲೀಸರು ಒಂದು ಸುತ್ತು ಗೋಲಿಬಾರು ನಡೆಸಿದರು.

ಹೋಟೆಲ್‌ ಒಂದರ ಮೇಲೆ ಹಲ್ಲೆ ಮಾಡಿದ ಉದ್ರಿಕ್ತ ಜನರು ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿದರೆಂದು ಪೊಲೀಸರು ತಿಳಿಸಿದರು.

ಗೋಲಿಬಾರಿನಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT