50 ವರ್ಷದ ಹಿಂದೆ: ಭಾನುವಾರ, 3–1–1971
ರಾಜ್ಯ ವಿಧಾನಸಭೆ ವಿಸರ್ಜನೆ ಇಲ್ಲ
ಬೆಂಗಳೂರು, ಜ.2– ಇಂದು ನಡೆದ ಮಂತ್ರಿಮಂಡಲದ ಅನೌಪಚಾರಿಕ ಸಭೆ ವಿಧಾನಸಭೆಯ ವಿಸರ್ಜನೆ ಕುರಿತು ‘ಯೋಚಿಸಬಾರದೆಂದು’ ಸರ್ವಾನುಮತದಿಂದ ತೀರ್ಮಾನಿಸಿತು.
ಸಚಿವರು, ರಾಜ್ಯ ಸಚಿವರು ಹಾಗೂ ಉಪಸಚಿವರು ಹಾಜರಿದ್ದ ಈ ಸನೌಪಚಾರಿಕ ಸಭೆ ಸುಮಾರು ಎರಡು ಗಂಟೆಗಳ ಕಾಲ ಲೋಕಸಭೆಯ ಮಧ್ಯಂತರ ಚುನಾವಣೆಯ ಜೊತೆಗೆ ಚುನಾವಣೆ ನಡೆಸಲು ವಿಧಾನಸಭೆಯನ್ನು ವಿಸರ್ಜಿಸಬೇಕೆ ಬೇಡವೇ ಎಂಬ ಪ್ರಶ್ನೆಯನ್ನು ‘ಸರ್ವಮುಖಗಳಿಂದ ಪರಿಶೀಲಿಸಿ’ ಈ ಒಮ್ಮತದ ತೀರ್ಮಾನಕ್ಕೆ ಬಂದಿತು.
ಸಭೆಯ ತೀರ್ಮಾನವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರಪಾಟೀಲ್ ಅವರು ಈ ಪ್ರಶ್ನೆಯ ಬಗ್ಗೆ ಮಂತ್ರಿಮಂಡಲದಲ್ಲಿ ಭಿನ್ನಾಭಿಪ್ರಾಯಗಳಿವೆಯಂಬ ವರದಿಯನ್ನು ನಿರಾಕರಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.