ಮಂಗಳವಾರ, ಮೇ 11, 2021
27 °C

50 ವರ್ಷಗಳ ಹಿಂದೆ: ಶನಿವಾರ 10.4.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ಇಲ್ಲ
ದೆಹಲಿ, ಏ. 9–
ಮೈಸೂರು ರಾಜ್ಯದಲ್ಲಿ ಸರ್ಕಾರ ರಚನೆಗೆ ಯಾವ ಯತ್ನವನ್ನೂ ನಡೆಸಬಾರದೆಂದು ಆಡಳಿತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಡಿ.ಸಂಜೀವಯ್ಯನವರು ಇಂದು ರಾಜ್ಯ ಶಾಖೆಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಸರ್ಕಾರ ರಚಿಸಲು ಹೈಕಮಾಂಡ್ ವಿರೋಧಕ್ಕೆ ಕಾರಣಗಳೇ ನೆಂಬುದನ್ನು ಶ್ರೀ ಉಮಾಶಂಕರ್ ದೀಕ್ಷಿತ್‌ರವರು ಶ್ರೀ ದೇವರಾಜ ಅರಸ್ ಮತ್ತು ಶ್ರೀ ಎಚ್. ಸಿದ್ಧವೀರಪ್ಪನವರಿಗೆ ತಿಳಿಸಿದ್ದರು. ರಾಜ್ಯದಲ್ಲಿ ಮಂತ್ರಿಮಂಡಲ ರಚನೆಗೆ ಪಕ್ಷದಲ್ಲಿ ಸರ್ವಾನುಮತವಿಲ್ಲ ಎಂದು ಹೈಕಮಾಂಡ್ ಭಾವಿಸಿದೆಯೆಂದು ವರದಿಯಾಗಿದೆ.

ಬಾಂಗ್ಲಾದೇಶದ ಅರ್ಧ ಭಾಗ ವಿಮುಕ್ತಿ
ಋಷ್ತಿಯಾ, ಏ. 9–
ದೇಶಪ್ರೇಮ ಮತ್ತು ಉತ್ಸಾಹಗಳೇ ಪ್ರಮುಖ ಆಯುಧಗಳಾಗಿ, ಎರಡು ವಾರಗಳ ಹಿಂದೆ ಸ್ವಾತಂತ್ರ್ಯ ಸಮರವನ್ನಾರಂಭಿಸಿದ ಪೂರ್ವ ಬಂಗಾಳದ ಜನರು ಇಂದು ತಮ್ಮ ಪ್ರಾಂತ್ಯದ ಅರ್ಧಭಾಗವನ್ನು ವಶಪಡಿಸಿಕೊಂಡಿರುವಂತೆ ಕಂಡುಬರುತ್ತಿದೆ.

ಕನಿಷ್ಠ ಪಕ್ಷ ಅಲ್ಲಿಯ ಎರಡೂವರೆ ಕೋಟಿ ಜನರ (ಮೂರನೇ ಒಂದು ಭಾಗದಷ್ಟು) ಮಟ್ಟಿಗಾದರೂ ಸ್ವತಂತ್ರ ಬಾಂಗ್ಲಾದೇಶದ ಕನಸು ನನಸಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು