ಮಂಗಳವಾರ, ಮೇ 18, 2021
29 °C

ಪ್ರಜಾವಾಣಿ 50 ವರ್ಷಗಳ ಹಿಂದೆ: 26-3- 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡದ ಉಗ್ರಾಣದಲ್ಲಿ ಗುರುತಿಸಿದ ಮತಚೀಟಿಗಳು: ನ್ಯಾಯಾಂಗ ತನಿಖೆಗೆ ಒತ್ತಾಯ

ನವದೆಹಲಿ, ಮಾರ್ಚ್‌ 25– ಸಂಸತ್ತಿನ ಉಭಯ ಸದನಗಳಲ್ಲೂ ವಿರೋಧ ಪಕ್ಷ ಇಂದು ಆಡಳಿತ ಪಕ್ಷದ ಮೇಲೆ ತನ್ನ ಪ್ರಪ್ರಥಮ ಅಸ್ತ್ರವನ್ನು ಪ್ರಯೋಗಿಸಿತು.

ಈಚಿನ ಚುನಾವಣೆಗಳ ನಂತರ ಚಂಡೀಗಡದ ಖಾಸಗಿ ಉಗ್ರಾಣವೊಂದರಲ್ಲಿ ಗುರುತಿಸಿದ ಸಾವಿರಾರು ಮತಚೀಟಿಗಳು ಕಂಡುಬಂದಿವೆ. ಅದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ವಿರೋಧ ಪಕ್ಷದ ಒತ್ತಾಯವಾಗಿತ್ತು. ಜನಸಂಘದ ಸದಸ್ಯರು ಕೈಯಲ್ಲಿ ಒಂದು ಹಿಡಿ ಮತಪತ್ರಗಳನ್ನು ಹಿಡಿದು ಕೈಬೀಸುತ್ತಾ ಸರ್ಕಾರದಿಂದ ತೃಪ್ತಿಕರ ವಿವರಣೆ ಬಯಸಿದರು.

ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸಂಪುಟ ರಚನೆ ಯತ್ನ

ಬೆಂಗಳೂರು, ಮಾರ್ಚ್‌ 25– ವಿಧಾನಸಭೆಯ ಕಾಂಗ್ರೆಸ್ಸೇತರ ಪಕ್ಷಗಳ ಪರವಾಗಿ ಮಂತ್ರಿಮಂಡಲ ರಚಿಸಲು ತಮಗೆ ಬಹುಮತದ ಬೆಂಬಲವಿದೆ ಎಂದು ತಿಳಿಸುವ ಪತ್ರವನ್ನು ನಾಳೆ ರಾಜ್ಯಪಾಲರಿಗೆ ಅರ್ಪಿಸುವ ಸಂಭವವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು