ರಕ್ಷಣಾ ಶಾಖೆ ರಹಸ್ಯ ವರದಿ ಬ್ರಿಟಿಷ್ ಗ್ರಂಥಕರ್ತನಿಗೆ ಬಯಲಾದ ಬಗ್ಗೆ ಆಕ್ರೋಶ

ನವದೆಹಲಿ, ನ. 9– ಬ್ರಿಟಿಷ್ ಲೇಖಕ ನವಿಲ್ ಮಾಕ್ಸ್‌ವೆಲ್ ಅವರ ‘ಇಂಡಿಯಾಸ್ ಚೈನಾ ವಾರ್’ ಎಂಬ ಪುಸ್ತಕಕ್ಕೆ ವಸ್ತುವನ್ನು ಯಾರು ಒದಗಿಸಿದರೆಂಬ ಪ್ರಶ್ನೆಯನ್ನು ಪರಿಶೀಲಿಸಿ ‘ಸಾಧ್ಯವಾದಷ್ಟು ಶೀಘ್ರವೇ’ ಕ್ರಮ ತೆಗೆದುಕೊಳ್ಳುವುದಾಗಿ ರಕ್ಷಣಾ ಸಚಿವ ಶ್ರೀ ಜಗಜೀವನರಾಂ ಅವರು ಇಂದು ಲೋಕಸಭೆಗೆ ಭರವಸೆ ಕೊಟ್ಟರು.

ಮಾಕ್ಸ್‌ವೆಲ್ ಅವರು ಅನುಮತಿ ಪಡೆದಿದ್ದರೇ, ಇಲ್ಲದಿದ್ದರೆ ಲೇಖಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶ್ರೀನಾಥ್ ಪೈ ಪ್ರಶ್ನಿಸಿದ್ದರು.

ಪ್ರಸ್ತುತ ಅಧಿವೇಶನ ಕಾಲದಲ್ಲೇ ಸಂಸತ್ ಸಮಿತಿ ರಚನೆ?

ನವದೆಹಲಿ, ನ. 9– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಪರಿಶೀಲನೆಗಾಗಿ ಪ್ರಸ್ತುತ ಸಂಸತ್ ಅಧಿವೇಶನದ ಕಾಲದಲ್ಲೇ ಸಂಸತ್ ಸಮಿತಿಯೊಂದನ್ನು ರಚಿಸುವ ನಿರೀಕ್ಷೆಯಿದೆ.

ಸಮಿತಿಯನ್ನು ರಚಿಸುವಂತೆ ಲೋಕಸಭೆ ಮತ್ತು ರಾಜ್ಯಸಭೆಯ ಅಧ್ಯಕ್ಷರುಗಳನ್ನು ಕೋರುವ ನಿರ್ಣಯವೊಂದನ್ನು ಸರ್ಕಾರ ಶೀಘ್ರದಲ್ಲೇ ತರಲಿದೆಯೆಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.